ಮುಳ್ಳೇರಿಯ: ಚೊಟ್ಟೆ ಕುಂಡಂಗುಳಿ ಶ್ರೀ ದುರ್ಗಾದೇವಿ ದೇವರ ಮನೆಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಗುರುವಾರ ಆರಂಭಗೊಂಡಿದ್ದು ಡಿ. 30ರ ತನಕ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಣಪತಿ ಹವನ, ಕುಂಡಂಗುಳಿ ಪೇಟೆಯಿಂದ ದೇವರ ಮನೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಲಾಡ್ ಮನೆತನದ ಕಾಸರಗೋಡು, ಮಲ್ಲ, ಅಡೂರು, ಕುಂಟಾರು, ಅಂಬುಕುಂಜೆ, ಕಾರ್ಕಳ, ಬೆಂಗಳೂರು, ಮಂಗಳೂರು, ಸುಳ್ಯ ವಲಯಗಳ ನೇತೃತ್ವದಲ್ಲಿ ಪ್ರತ್ಯೇಕ ಹೊರೆಕಾಣಿಕೆಯನ್ನು ಕುಂಡಂಗುಳಿಯಲ್ಲಿ ಒಟ್ಟು ಸೇರಿಸಿ, ಚೆಂಡೆಮೇಳ, ಡೊಳ್ಳುಕುಣಿತ, ಮುತ್ತುಕೊಡೆ, ವಿವಿಧ ವೇಷಗಳು, ಸುಡುಮದ್ದು ಪ್ರದರ್ಶನದೊಂದಿಗೆ ವಿಜೃಂಭಣೆಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಅನಂತರ ಉಗ್ರಾಣ ತುಂಬಿಸುವುದು, ಶಾಸ್ವತ ಚಪ್ಪರ ಲೋಕಾರ್ಪಣೆ ನಡೆಯಿತು. ಸಂಜೆ ಬ್ರಹ್ಮಶ್ರೀ ಇರಿಯ ಕೃಷ್ಣದಾಸ ತಂತ್ರಿ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ವಿವಿಧ ವೈದಿಕ ಕಾರ್ಯಕ್ರಮಗಳು ನೆರವೇರಿತು. ಕುಲಗುರುಗಳಾದ ಚೊಟ್ಟೆ ರಾಮಕೃಷ್ಣ ರಾವ್ ಅವರಿಂದ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ, ಕುಂಟಾರು ವಿವೇಕಾನಂದ ನಾಟ್ಯ ನಿಲಯದವರಿಂದ ಭರತನಾಟ್ಯ, ಕುಟುಂಬ ಸದಸ್ಯರಿಂದ ನೃತ್ಯ ವೈವಿಧ್ಯ ನಡೆಯಿತು.
ಡಿ.30ರಂದು ಬೆಳಿಗ್ಗೆ 5ರಿಂದ 108 ತೆಂಗಿನಕಾಯಿ ಗಣಪತಿ ಹೋಮ, 7ರಿಂದ ವೈಧಿಕ ಕಾರ್ಯಕ್ರಮಗಳು, 9.55ಕ್ಕೆ ಶ್ರೀ ಕಾಲಭೈರವ, ಶ್ರೀ ಶಿವಪಾರ್ವತಿ, ಶ್ರೀ ಹೇಮಾಂಬಿಕೆ, ಶ್ರೀ ದುರ್ಗಾದೇವಿ, ಶ್ರೀ ಕಾಳಿ ಎಂಬೀ ಸಾನ್ನಿಧ್ಯ ದೇವರುಗಳ ನೂತನ ವಿಗ್ರಹಗಳ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ, ನಾಗರಕ್ತೇಶ್ವರಿ ಕಟ್ಟೆಯಲ್ಲಿ ತಂಬಿಲ, ಕಲಶಾಭಿಷೇಕ, ಪ್ರತಿಷ್ಟಾಬಲಿ, ಶ್ರೀ ವೆಂಕಟ್ರಮಣ ದೇವರ ಪಾನಕ ಪೂಜೆ, ಮಧ್ಯಾಹ್ನ ಮಹಾಪೂಜೆ, ಗುಳಿಗನಿಗೆ ಕಲಯ, ನಿತ್ಯ ನೈಮಿತ್ಯಾದಿಗಳ ನಿರ್ಣಯ, ಮಧ್ಯಾಹ್ನ 1ಕ್ಕೆ ಅನ್ನದಾನ, 3ರಿಂದ ಧಾರ್ಮಿಕ ಸಭೆ, ಕುಲಗುರು ರಾಮಕೃಷ್ಣ ರಾವ್ ಲಾಡ್ ಅಧ್ಯಕ್ಷತೆ ವಹಿಸುವರು, ಬ್ರಹ್ಮಶ್ರೀ ಇರಿಯ ಕೃಷ್ಣದಾಸ ತಂತ್ರಿ ಆಶೀರ್ವಚನ ನೀಡುವರು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಧಾರ್ಮಿಕ ಭಾಷಣ ಮಾಡುವರು, ಗೌರವ ಅತಿಥಿಗಳಾಗಿ ದೈವಜ್ಞರಾದ ಕೆ.ಎಂ.ಶರ್ಮ ಮುಳ್ಳೇರಿಯ, ರಾಧಾಕೃಷ್ಣ ಹಾಡಿಗದ್ದೆ, ವಾಸ್ತುಶಿಲ್ಪಿ ಪ್ರಸಾದ್ ಮುನಿಯಂಗಳ, ಶಿಲ್ಪಿ ಪ್ರಕಾಶ್ ಕಾರ್ಕಳ, ಬೇಡಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರನ್, ಮೋಹನ್ ನಾಯರ್ ಚೊಟ್ಟೆ, ಗಿರಿಧರ ರಾವ್ ಹಿತ್ಲುಗದ್ದೆ ದೇವರಮನೆ, ರಾಘವೇಂದ್ರ ರಾವ್ ಹಣ್ಸೆಡ್ಕ ವಾಗ್ಮಾನ್ ದೇವರಮನೆ, ದಾಕೋಜಿ ರಾವ್ ಚಂದ್ರಮಾನ್ ದೇವರಮನೆ ಭಾಗವಹಿಸುವರು. ಆಡಳಿತೆ ಸಮಿತಿ ಅಧ್ಯಕ್ಷ ಹರೀಶ್.ಎಂ.ರಾವ್, ಯಕ್ಷಗಾನ ಕಲಾವಿದ ನಾಗೋಜಿ ರಾವ್ ನಡುಬಯಲು, ಶಾರದಾ ಗೋಪಾಲ್ ರಾವ್ ಕಾಪಿಹಿತ್ಲು, ಗೌರವ ಸಲಹೆಗಾರ ಕೇಶವ ರಾವ್ ಅಂಬುಕುಂಜೆ, ಕೋಶಾಧಿಕಾರಿ ಜಯಂತ.ಎಂ, ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಾರ್ಕಳ, ಸುರೇಶ್.ಕೆ ಮಂಗಳೂರು, ಪ್ರಧಾನ ಕಾರ್ಯದರ್ಶಿ ಮಾಧವ ರಾವ್ ಕಾಸರಗೋಡು, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಕೆ.ಬಿ.ಕೀರ್ತನ್ ಕುಮಾರ್ ಕಾರ್ಕಳ, ಕಾರ್ಯದರ್ಶಿ ರಾಜ್ ಕುಮಾರ್, ಆಡಳಿತೆ ಸಮಿತಿ ಕಾರ್ಯದರ್ಶಿ ಅಶೋಕ್ ರಾವ್ ಭಾಗವಹಿಸುವರು. ಸಂಜೆ 5ರಿಂದ ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ ಶ್ರೀದೇವಿ ಮಹಾತ್ಮೆ, ಸಂಜೆ 6ಕ್ಕೆ ದೀಪಾರಾಧನೆ, ರಾತ್ರಿ 8ಕ್ಕೆ ಕುಲದೇವರಿಗೆ ಮಹಾಪೂಜೆ, 9ಕ್ಕೆ ಅನ್ನದಾನ ನಡೆಯಲಿದೆ.