ಮಧೂರು: ಮಧೂರು ಪಬ್ಲಿಕ್ ವೆಲ್ಪೇರ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ಡಿ.30 ರಂದು ಬೆಳಿಗ್ಗೆ 10 ಗಂಟೆಗೆ ಸಂಘದ ಕಚೇರಿ ಮನ್ನಿಪ್ಪಾಡಿ ಗಣೇಶನಗರದ ಚಂದ್ರಗಿರಿ ಸಮುಚ್ಛಯ ಸಭಾಂಗಣದಲ್ಲಿ ನಡೆಯಲಿದೆ.
ಮಹಾಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ, ಹೊಸ ವರ್ಷದ ಮುಂಗಡಪತ್ರ, ಸೊಸೈಟಿ ನಿಯಮಗಳ ಪುನರ್ ನವೀಕರಣ ಮೊದಲಾದ ವಿಷಯಗಳ ಕುರಿತು ಚರ್ಚಿಸಲಾಗುವುದು. ಕಳೆದ ವರ್ಷದ ಲೆಕ್ಕಪತ್ರ ಪರಿಶೋಧನೆಯ ವರದಿಗಳ ಅಂಗೀಕಾರ ನಡೆಯಲಿದೆ.
ಮಹಾಸಭೆಯಲ್ಲಿ ಸೊಸೈಟಿಯ ಎಲ್ಲ ಸದಸ್ಯರು ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿ ಸಹಕರಿಸುವಂತೆ ಸೊಸೈಟಿಯ ಅಧ್ಯಕ್ಷ ತಾರಾನಾಥ ಮಧೂರು, ಸೊಸೈಟಿಯ ಕಾರ್ಯದರ್ಶಿ ರಾಮೇಶ್ವರಿ ಜಂಟಿ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.