ಚೆನ್ನೈ: ಯುವತಿಯರ ಖಾಲ್ಗೆಜ್ಜೆಯ ಘಲ್ ಗಲ್ ಶಬ್ದವು ಹುಡುಗರ ಚಿತ್ತವನ್ನು ಕೆರಳಿಸುತ್ತದೆ ಎಂದು ತಮಿಳುನಾಡು ಶಿಕ್ಷಣ ಸಚಿವ ಕೆ.ಎ. ಸೈಂಗೊಟ್ಟಯ್ಯನ್ ಹೇಳಿದ್ದಾರೆ. ತಮಿಳುನಾಡಿನ ಸರ್ಕಾರಿ ಶಾಲೆಗಳಲ್ಲಿ ಕಾಲ್ಗೆಜ್ಜೆ ಹಾಗೂ ಉಂಗುರ ಧರಿಸುವುದನ್ನು ನಿಷೇಧಿಸಿದ ಕುರಿತು ಪ್ರಕಟವಾಗಿದ್ದ ವರದಿ ಸಂಬಂಧ ಸಚಿವರು ಈ ಉತ್ತರ ನೀಡಿದ್ದಾರೆ.
ವಿದ್ಯಾರ್ಥಿನಿಯರ ಖಾಲ್ಗೆಜ್ಜೆಯ ದನಿ ಹುಡುಗರ ಮನಸ್ಸನ್ನು ಗಲಿಬಿಲಿ ಗೊಳಿಸುತ್ತದೆ, ಕಾಲ್ಗೆಜ್ಜೆಯ ಶಬ್ದ ಕೇಳಿದಾಗ ಕಲಿಯುವ ಹುಡುಗರ ಮನಸ್ಸು ಬೇರೊಂದು ಕಡೆ ಹರಿಯುತ್ತದೆ ಎಂದಿದ್ದಾರೆ.
ತಮಿಳುನಾಡು ರಾಜ್ಯದ ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಕಾಲ್ಗೆಜ್ಜೆ, ಉಂಗುರ ಧರಿಸುವುದು, ಹೂ ಮುಡಿಯುವುದನ್ನು ನಿಷೇಧಿಸಲಾಗಿದೆ ಎಂಬ ವರದಿ ಬಗ್ಗೆ ಪ್ರತಿಕ್ರಯಿಸಿದ ಸಚಿವ ಸೈಂಗೊಟ್ಟಯ್ಯನ್ ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ.
ವಿದ್ಯಾರ್ಥಿನಿಯರು ಶಾಲೆಗೆ ಆಗಮಿಸುವಾಗ ಉಂಗುರ ಧರಿಸಿದ್ದರೆ ಅದು ಕಳೆದು ಹೋಗುವ ಸಾಧ್ಯತೆ ಇದೆ. ಇದರಿಂದ ವಿದ್ಯಾರ್ಥಿನಿ ಹಾಗೂ ಆಕೆಯ ಮನೆಯವರಿಗೆ ತೊಂದರೆಯಾಗಲಿದೆ. ಕಾಲ್ಗೆಜ್ಜೆಯ ಘಲ್ ಘಲ್ ಶಬ್ದದಿಂದ ವಿದ್ಯಾರ್ಥಿಗಳ ಮನಸ್ಸು ಚಂಚಲವಾಗುತ್ತದೆ. ಆದರೆ ಹೂವು ಮುಡಿಯಬೇಡಿರೆಂದು ನಿಷೇಧಿಸಿಲ್ಲ ಎಂದರು.
ಇದು ಭಯಂಕರ ಸಂಶೋಧನೆ ಮರ್ರೆ!-ಕಾಲ್ಗೆಜ್ಜೆಯ ಘಲ್ ಘಲ್ ಶಬ್ದ ಹುಡುಗರ ಮನಸ್ಸನ್ನು ಕೆರಳಿಸುತ್ತದೆ: ತಮಿಳುನಾಡು ಶಿಕ್ಷಣ ಸಚಿವ
0
ಡಿಸೆಂಬರ್ 04, 2018