ಕಾಸರಗೋಡು: ವೆಳ್ಳಿಕೋತ್ ಗ್ರಾಮೀಣ ಉದ್ಯಮ ಅಭಿವೃದ್ಧಿ ಇನ್‍ಸ್ಟಿಟ್ಯೂಟ್‍ನಿಂದ ಕಲಿತು ಹೊರಬಂದವರಿಗೆ ಜೋಬ್ ಕ್ಲಬ್ ಬಗ್ಗೆ ಜಾಗೃತಿ ತರಗತಿ ನಡೆಸಲಾಗುವುದು.
ಸಹಾಯಕ ಜಿಲ್ಲಾಧಿಕಾರಿ ಅವರ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಸಹಾಯಕ ಜಿಲ್ಲಾಧಿಕಾರಿ ಎ.ಉಣ್ಣಿಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. 2018 ಮಾರ್ಚ್ ತಿಂಗಳನಂತರ ನಡೆದಿರುವ ಚಟುವಟಿಕೆಗಳ ಕುರಿತು ಅವಲೋಕನ ನಡೆಸಲಾಯಿತು.
ಜಿಲ್ಲಾ ಉದ್ಯೋಗ ಅ„ಕಾರಿ ಕೆ.ಸ್ನೇಹಲತಾ, ಜಿಲ್ಲಾ ಮಹಿಳಾ ಕಲ್ಯಾಣ ಅ„ಕಾರಿ ಎಂ.ಲಲಿತಾ, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್, ಎನ್.ಡಿ.ಎಂ.ಸಿ.ಎಸ್.ರಮಣನ್, ಎಲ್.ಎಸ್.ಬೀನಾ, ಜೋಯ್ ಮೋನ್ ಮೊದಲಾದವರು ಉಪಸ್ಥಿತರಿದ್ದರು.