ಕುಂಬಳೆ: ಊರಿನ ಏಕತೆ ಹಾಗೂ ಸಾಮರಸ್ಯಗಳಿಗಾಗಿ ಸಂಘಸಂಸ್ಥೆಗಳು ಕೈಲಾದ ಕೊಡುಗೆ ನೀಡಬೇಕು. ಕ್ರೀಡಾ, ಸಾಂಸ್ಕøತಿಕ ಚಟುವಟಿಕೆಗಳು ಆಯಾ ಪ್ರದೇಶಗಳ ಸಾಮರಸ್ಯದ ಕೈಗನ್ನಡಿ ಎಂದು ಕುಂಬಳೆ ಆರಕ್ಷಕ ಠಾಣಾಧಾರಿಕಾರಿ ಟಿ.ವಿ.ಅಶೋಕನ್ ತಿಳಿಸಿದರು.
ಬಭಮಬ್ರಾಣ ತಿಲಕನಗರದ ವಿಕ್ರಮ ಪ್ರೆಂಡ್ಸ್ ಕ್ಲಬ್‍ನ ನೂತನ ಕಟ್ಟಡದ ಲೋಕಾರ್ಪಣೆ ಸಮಾರಂಭದ ಅಂಗವಾಗಿ ಗುರುವಾರ ನಡೆದ ಆಹ್ವಾನಿತ ತಂಡಗಳ ಕಬ್ಬಡಿ ಪಂದ್ಯಾಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ದುರುತಕ್ಕೊಳಗಾದವರನ್ನು ಗುರುತಿಸಿ ಅವರ ಕಣ್ಣೀರೊರೆಸುವಲ್ಲಿ ಸಂಘಟನೆಗಳು ಮುಂದಾಗಬೇಕು. ಈ ನಿಟ್ಟಿನಲ್ಲಿ ವಿಕ್ರಮ ತಂಡದ ಸಾಧನೆ ಸ್ತುತ್ಯರ್ಹ ಎಂದು ಅವರು ತಿಳಿಸಿದರು.
ಲೋಕನಾಥ ಶೆಟ್ಟಿ ಬಂಬ್ರಾಣ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆಗೀತಾ ಲೋಕನಾಥ ಶೆಟ್ಟಿ, ಬಿ.ಕೇಶವ ತಲಪ್ಪಾಡಿ, ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿ ಉಷಾ, ಉದ್ಯಮಿ ಬಾಬು ರಾಜ್, ಯೋಗೀಶ ಆಚಾರ್ಯ, ಭೋಜರಾಜ ಬೆಜಪ್ಪೆ, ಜಗನ್ನಾಥ ಶೆಟ್ಟಿ ಬಂಬ್ರಾಣ, ಶಂಕರ ಆಳ್ವ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಕೇಶವ ಆಚಾರ್ಯ ಸ್ವಾಗತಿಸಿ, ದಿನೇಶ್ ಕೊಟ್ಯದ ಮನೆ ವಂದಿಸಿದರು. ಸದಾನಂದ ಆರಿಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು.
ಪಂದ್ಯಾಟದಲ್ಲಿ ಶಿವಕೃಷ್ಣ ಕೂಡ್ಲು(ಪ್ರಥಮ,), ಷಣ್ಮುಖ ಮುಗು (ದ್ವಿತೀಯ) ಸ್ವಾಗತ್ ಬಂಬಬ್ರಾಣ ತೃತೀಯ ಹಾಗೂ ಶಿವಶಕ್ತಿ ಮದೂರು ತೃತೀಯ ಸ್ಥಾನ ಪಡೆದುಕೊಂಡಿತು. ಈ ಸಂದರ್ಭ ಮಂಜೇಶ್ವರದ ಐಸಿರಿ ಕಲಾವಿದರಿಂದ ಬಂಜಿಗ್ ಹಾಕೊಡ್ಚಿ ತುಳು ನಾಟಕ ಪ್ರದರ್ಶನಗೊಂಡಿತು.