ಕುದಿಪ್ ಯೋಜನೆಗೆ ಮಕ್ಕಳ ಆಯ್ಕೆ
0
ಡಿಸೆಂಬರ್ 05, 2018
ಕಾಸರಗೋಡು: 5ರಿಂದ 8ನೇ ತರಗತಿ ವರೆಗಿನ ಮಕ್ಕಳಿಗೆ ಪರಿಣತ ತರಬೇತಿ ಒದಗಿಸಿ ಜಿಲ್ಲೆಯ ಕ್ರೀಡಾವಲಯಕ್ಕೆ ಅವರಿಂದ ಸಾಧನೆ ಸಲ್ಲುವಂತೆ ಮಾಡುವ ಉದ್ದೇಶದಿಂದ ಜಿಲ್ಲಾ ಪಂಚಾಯತ್ ಜಾರಿಗೊಳಿಸುವ "ಕುದಿಪ್(ಧುಮುಕುವಿಕೆ)"ಯೋಜನೆಗೆ ಮಕ್ಕಳ ಆಯ್ಕೆ ಡಿ.8ರಂದು ನಡೆಯಲಿದೆ. ಉಪಜಿಲ್ಲಾ ಮಟ್ಟದಲ್ಲಿ ಆಯ್ಕೆ ನಡೆಯಲಿದ್ದು, ಮಕ್ಕಳ ಮಾಹಿತಿಯನ್ನು ಸಂಬಂಧಪಟ್ಟವರು ಡಿ.12ರಂದು ಜಿಲ್ಲಾ ಪಂಚಾಯತ್ ಕಚೇರಿಗೆ ತಲಪಿಸಬೇಕು. ಡಿ.26,27,28ರಂದು ಉಪಜಿಲ್ಲಾ ಮಟ್ಟದಲ್ಲಿ ವಸತಿ ಸಹಿತ ತರಬೇತಿ ನೀಡಲಾಗುವುದು. ಆಯ್ಕೆ ನಡೆಯುವ ಕೇಂದ್ರಗಳು: ಕುಂಬಳೆ-ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆ, ಕಾಸರಗೋಡು ಸರಕಾರಿ ಕಾಲೇಜು ಮೈದಾನ, ಮಂಜೇಶ್ವರ ಮಣ್ಣಂಗುಳಿ ಹೈಯರ್ ಸೆಕೆಂಡರಿ ಶಾಲೆ, ಹೊಸದುರ್ಗ-ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲೆ, ಬೇಕಲ ಬಾರ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಚಿತ್ತಾರಿಕಲ್ ವೆಳ್ಳರಿಕುಂಡ್ ಸಂತ ಜ್ಯೂಡ್ ಹೈಯರ್ ಸೆಕೆಂಡರಿ ಶಾಲೆ, ಕಾಲಿಕಡವು ಪಂಚಾಯತ್ ಕ್ರೀಡಾಂಗಣ.