ಕಾಸರಗೋಡು: ನಿನ್ನೆಗೆ (ನ.30ಕ್ಕೆ) ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ: ಕೊಡುಗೆ ರಾಮಣ್ಣ ರೈ ಸಿನಿಮಾ 100 ದಿನಗಳ ಪ್ರದರ್ಶನ ಪೂರೈಸಿದೆ. ಈ ಬಗ್ಗೆ ಚಿತ್ರದ ನಿದರ್ೇಶಕ ರಿಷಬ್ ಶೆಟ್ಟಿ ಖುಷಿ ಹಂಚಿಕೊಂಡಿದ್ದಾರೆ.
ನನ್ನ ಹಿಂದಿನ ಚಿತ್ರ ಕಿರಿಕ್ ಪಾಟರ್ಿ 200 ದಿನಗಳ ಪ್ರದರ್ಶನ ಕಂಡಿತ್ತು. ಆದರೆ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ 100 ದಿನ ಪ್ರದರ್ಶನ ಪೂರೈಸಿದ್ದು ಇನ್ನಷ್ಟು ಖುಷಿ ಮತ್ತು ಸಮಾಧಾನ ನೀಡಿದೆ. ಕಿರಿಕ್ ಪಾಟರ್ಿಯಲ್ಲಿ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಸಿನಿಮಾ ಗೆಲುವಿಗೆ ಮುಖ್ಯ ಕಾರಣವಾಗಿತ್ತು. ಎರಡನೆಯದಾಗಿ ಸೋಷಿಯಲ್ ಮೀಡಿಯಾಗಳಿಂದ ಬಹಳ ಉಪಯೋಗವಾಯಿತು ಎಂದು ಶೆಟ್ಟಿ ತಿಳಿಸಿದ್ದಾರೆ.
ಕನ್ನಡ ಮಾಧ್ಯಮ ಶಾಲೆ ಮುಚ್ಚಿ ಹೋಗುವ, ಸಕರ್ಾರಿ ಶಾಲೆಗಳ ಶೋಚನೀಯ ಸ್ಥಿತಿಗತಿ ಬಗ್ಗೆ ಚಿತ್ರದ ಕಥೆಯಿದ್ದು ಇಲ್ಲಿ ಅನಂತ್ ನಾಗ್ ಅವರದ್ದು ಮುಖ್ಯ ಪಾತ್ರ. ಒಂದಷ್ಟು ಬಾಲ ಕಲಾವಿದರಿದ್ದರು. ಈ ಚಿತ್ರಕ್ಕೆ ನಾವು ಹಾಕಿದ್ದು ಕಡಿಮೆ ಬಂಡವಾಳ. ಆದರೆ ಚಿತ್ರ ಬಿಡುಗಡೆ ಸಮಯದಲ್ಲಿ ನಾನು ಮತ್ತು ಪ್ರಮೋದ್ ಶೆಟ್ಟಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ, ಸಾಲಕ್ಕಾಗಿ ಅಲೆದಾಡಿದ್ದೆವು. ಹೀಗಿರುವಾಗ ಚಿತ್ರ ಯಶಸ್ಸು ಖಂಡಿದ್ದು ಖಂಡಿತಾ ನಮಗೆ ಗೆಲುವೇ. ಕೇವಲ ದಡ್ಡ ದಡ್ಡ ಹಾಡಿನಿಂದ ಆರಂಭವಾದ ಚಿತ್ರವಿದು, ಅದು ಬಿಟ್ಟರೆ ನಾವು ಯಾವುದೇ ಪಬ್ಲಿಸಿಟಿ ಗಿಮಿಕ್, ಹೈಪ್ ಕ್ರಿಯೇಟ್ ಮಾಡಿರಲಿಲ್ಲ. ಪ್ರೇಕ್ಷಕರು ಗೆಲ್ಲಿಸಿದ ಚಿತ್ರವಿದು. ಒಳ್ಳೆಯ ಚಿತ್ರ ಮಾಡುವುದು ನಮ್ಮ ಕೆಲಸ, ಪ್ರೇಕ್ಷಕರು ಅದನ್ನು ನಿರ್ಧರಿಸುವವರು ಎಂಬುದಕ್ಕೆ ನಮ್ಮ ಈ ಸಿನಿಮಾ ಒಳ್ಳೆಯ ಉದಾಹರಣೆ. ಡಾ ರಾಜ್ ಕುಮಾರ್ ಅವರು ಹೇಳುತ್ತಿದ್ದಂತೆ ಅಭಿಮಾನಿಗಳೇ ದೇವರು ಅದು ಖಂಡಿತವಾಗಿಯೂ ಸತ್ಯ ಎಂದರು ರಿಷಬ್ ಶೆಟ್ಟಿ.
ಸಕರ್ಾರಿ ಶಾಲೆ ಸಿನಿಮಾ ಒಂದು ಕಮಷರ್ಿಯಲ್ ಚಿತ್ರ ಎನ್ನುತ್ತಾರೆ ನಿದರ್ೇಶಕರು. ಇದೊಂದು ಪ್ರಯೋಗಾತ್ಮಕ ಚಿತ್ರ ಪ್ರಶಸ್ತಿ ಗಳಿಸಬಹುದು ಎಂದು ನಮ್ಮನ್ನು ಕೇಳಿದವರು ಹಲವರಿದ್ದಾರೆ. ಚಿತ್ರದ ಗೆಲುವು ನಟ ಮತ್ತು ನಿದರ್ೇಶಕನಿಗೆ ಒಳ್ಳೆಯದು ಮಾಡುತ್ತದೆ ಎನ್ನುವುದಾದರೆ ನನ್ನ ವಿಚಾರದಲ್ಲಿ ಅದು ಸುಳ್ಳು. ಮುಂದಿನ ಚಿತ್ರದಲ್ಲಿ ಇನ್ನಷ್ಟು ಜಾಗ್ರತೆಯಿಂದ ಹತ್ತು ಪಟ್ಟು ಹೆಚ್ಚು ಶ್ರಮ ಹಾಕಿ ಕೆಲಸ ಮಾಡಬೇಕಾಗುತ್ತದೆ. ಕಿರಿಕ್ ಪಾಟರ್ಿಯಿಂದಲೂ ಹೆಚ್ಚು ಶ್ರಮ ಈ ಚಿತ್ರಕ್ಕೆ ಹಾಕಬೇಕಾಯಿತು ಎಂದು ತಮ್ಮ ಅನುಭವ ಹಂಚಿಕೊಂಡರು.