ಕುಂಬಳೆ: ಕಾಸರಗೋಡು ಜಿಲ್ಲಾ ಬಂಟರ ಸಂಘದ ಕಾರ್ಯಕಾರಿ ಸಮಿತಿ ಸಭೆಯು ಕುಂಬಳೆ ಸಿಟಿ ಹಾಲ್ ಕಟ್ಟಡದಲ್ಲಿರುವ ಸಂಘದ ಕಾರ್ಯಾಲಯದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ನ್ಯಾಯವಾದಿ ಎ.ಸದಾನಂದ ರೈ ಅವರು ಮಾತನಾಡಿ ತುಳು ಭಾಷಾ ಕೋಟಾದಲ್ಲಿ ಉನ್ನತ ವೃತ್ತಿಪರ ಶಿಕ್ಷಣಕ್ಕೆ ಹಾಗು ಇತರ ಶೈಕ್ಷಣಿಕ ಮೀಸಲಾತಿಗಳಿಗೆ ಕಾಸರಗೋಡು ಜಿಲ್ಲೆಯ ತುಳು ಮಾತೃ ಭಾಷಿಕರನ್ನು ಕೂಡಾ ಪರಿಗಣಿಸಬೇಕೆಂದು ಆಗ್ರಹಿಸಿ ಕರ್ನಾಟಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಸಂಘವು ಇನ್ನಷ್ಟು ಸಮಾಜಮುಖಿ ಕಾರ್ಯಯೋಜನೆಗಳೊಂದಿಗೆ ಮುಂದುವರಿಯಲು ಸಮಾಜ ಬಾಂಧವರು ಸರ್ವ ರೀತಿಯ ಸಹಕಾರ ಅಗತ್ಯವೆಂದು ಅವರು ಹೇಳಿದರು.
ಪತ್ರಿಕಾ ಮಾಧ್ಯಮ ರಂಗದಲ್ಲಿ ವಿಶಿಷ್ಟ ಸಾಧನೆಗೈಯುತ್ತಿರುವ ರಾಜೇಶ್ ರೈ ಚಟ್ಲ ಕಾಸರಗೋಡು ಅವರಿಗೆ ದಕ್ಷಿಣ ಏಶ್ಯಾ ಲಾಡ್ಲೀ ಮಾಧ್ಯಮ ಪ್ರಶಸ್ತಿ ಲಭಿಸಿರುವುದಕ್ಕೆ ಸಭೆಯು ಸಂತಸ ವ್ಯಕ್ತಪಡಿಸಿ ಅಭಿನಂದಿಸಿತು. ಅದೇ ರೀತಿ ಇತ್ತೀಚೆಗೆ ಮೂಡಬಿದಿರೆ ಆಳ್ವಾಸ್ ನುಡಿಸಿರಿಯ ಅಂಗವಾಗಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಸಮ್ಮೇಳನವನ್ನು ಯಶಸ್ವಿಯಾಗಿ ನಿಭಾಯಿಸಿದ ಕಾಸರಗೋಡಿನ ಅಪೂರ್ವ ಪ್ರತಿಭೆ ಸನ್ನಿಧಿ ಟಿ.ರೈ ಅವರನ್ನು ಅಭಿನಂದಿಸಲಾಯಿತು.
ಬೆಂಗಳೂರು ಬಂಟರ ಸಂಘವು 2019 ಜನವರಿ 12 ರಂದು ಬೆಂಗಳೂರಿನಲ್ಲಿ ನಡೆಸುವ ಅಂತಾರಾಷ್ಟ್ರೀಯ ಬಂಟರ ಸಂಘಗಳ ಕಬಡ್ಡಿ ಪಂದ್ಯಾಟಕ್ಕೆ ಹಾಗು ಬಂಟ್ವಾಳ ಬಂಟರ ಸಂಘದ ವಾರ್ಷಿಕೋತ್ಸವದ ಅಂಗವಾಗಿ 2019 ಜನವರಿ 13 ರಂದು ನಡೆಸಲಾಗುವ ಸಾಂಸ್ಕøತಿಕ ಕಲಾ ಸ್ಪರ್ಧೆಗಳಿಗೆ ಜಿಲ್ಲಾ ಬಂಟರ ಸಂಘದಿಂದ ತಂಡಗಳನ್ನು ಕಳುಹಿಸಲು ಸಭೆಯಲ್ಲಿ ನಿಧರಿಸಲಾಯಿತು.
ಜಿಲ್ಲಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಎಂ.ದಾಮೋದರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ಕೋಶಾಧಿಕಾರಿ ಚಂದ್ರಹಾಸ ರೈ ಪೆರಡಾಲಗುತ್ತು, ಮಾಜಿ ಅಧ್ಯಕ್ಷ ಜಿ.ಕೆ.ಶೆಟ್ಟಿ ಬೊಳ್ನಾಡುಗುತ್ತು, ಕುಂಬಳೆ ಫಿರ್ಕಾ ಬಂಟ್ಸ್ ಸರ್ವೀಸ್ ಸೊಸೈಟಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ, ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡು, ಮೋಹನ ರೈ ಕಯ್ಯಾರು, ಸುಜಾತ ಶೆಟ್ಟಿ ಕುಂಬ್ಡಾಜೆ, ಮೋನಪ್ಪ ಆಳ್ವ ವಡಂಬಳೆ, ಚಿದಾನಂದ ಆಳ್ವ ಮಂಜಕೊಟ್ಟಿಗೆ, ಪದ್ಮನಾಭ ಭಂಡಾರಿ, ರಾಧಾಕೃಷ್ಣ ರೈ, ರಘು ಶೆಟ್ಟಿ ಕುಂಜತ್ತೂರು ಮೊದಲಾದವರು ಮಾತನಾಡಿದರು.