ಕಾಸರಗೋಡು:ನೆಹರೂಯುವಕೇಂದ್ರ ವತಿಯಿಂದ ಜಿಲ್ಲೆಯ ಯುವಜನತೆಗಾಗಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಡಿ.4ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಯೋಜನಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಲಿದೆ.
18ರಿಂದ 29 ವರ್ಷ ಪ್ರಾಯದವರಿಗಾಗಿ "ದೇಶಪ್ರೇಮ ಮತ್ತು ರಾಷ್ಟ್ರ ನಿರ್ಮಾಣ' ಎಂಬ ವಿಷಯದಲ್ಲಿ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಭಾಷಣ ಸ್ಪರ್ಧೆ ನಡೆಯಲಿದೆ. 5 ಸಾವಿರ ರೂ. ಪ್ರಥಮ, 2 ಸಾವಿರ ರೂ. ದ್ವಿತೀಯ ಮತ್ತು ಒಂದು ಸಾವಿರ ರೂ. ತೃತೀಯ ಬಹುಮಾನಗಳಿದ್ದು, ಜೊತೆಗೆ ಅರ್ಹತಾಪತ್ರವೂ ಲಭಿಸಲಿದೆ. ಪ್ರಥಮ ಬಹುಮಾನ ಗಳಿಸಿದವರಿಗೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. ಆಸಕ್ತರು ಬೆಳಗ್ಗೆ 10 ಗಂಟೆಗೆ ಸಿವಿಲ್ ಸ್ಟೇಷನ್ನಲ್ಲಿರುವ ನೆಹರೂ ಯುವಕೇಂದ್ರದಲ್ಲಿ ಹಾಜರಾಗಬೇಕು.