ಯೋಗ ತರಬೇತಿ ಶಿಬಿರ
0
ಡಿಸೆಂಬರ್ 05, 2018
ಮಂಜೇಶ್ವರ: ಮುರತ್ತಣೆ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಇದರ ಆಶ್ರಯದಲ್ಲಿ ಪ್ರಕಾಶಾನಂದ ಯೋಗ ಗುರು, ಸರ್ವಧರ್ಮ ಯೋಗಾಶ್ರಮ ಜಾಗೃತಿ ಕೇಂದ್ರ ವಾರಾಣಾಸಿ ಇವರ ಮಾರ್ಗದರ್ಶನದಲ್ಲಿ 7 ದಿನಗಳ ಯೋಗ ತರಬೇತಿ ಶಿಬಿರವು ಜರಗಿತು.
ಇದರ ಅಂಗವಾಗಿ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಹಾಗು ಶಿಬಿರಾರ್ಥಿಗಳ ಪರವಾಗಿ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಗುರುಗಳನ್ನು ಸಮ್ಮಾನಿಸಲಾಯಿತು. ಕ್ಲಬ್ಬಿನ್ ಗೌರವ ಅಧ್ಯಕ್ಷ ಕೃಷ್ಣ ಮೇಸ್ತ್ರಿ, ಹಿರಿಯರಾದ ಗೋಪಾಲ ಸುವರ್ಣ, ವರ್ಕಾಡಿ ಗ್ರಾಮ ಪಂಚಾಯತು ಮಾಜಿ ಸದಸ್ಯರಾದ ನಾಗಪ್ಪ ಅರಿಬೈಲು ಹಾಗೂ ಕ್ಲಬ್ಬಿನ ಸರ್ವ ಸದಸ್ಯರು ಉಪಸ್ಥಿತರಿದ್ದರು.