ಕಾಸರಗೋಡು: ಸಹಕಾರಿ ಇಲಾಖೆಯ ಸಾಲದ ಗಣನೆ ಪರಿಶೀಲಿಸಿದ ಕೇಸುಗಳಲ್ಲಿ ಇನ್ನೂ ಮೊಬಲಗು ಲಭಿಸದೇ ಇರುವ ಮೀನುಗಾರರಿಗೆ ತತ್‍ಕ್ಷಣ ವಿತರಣೆ ನಡೆಸುವಂತೆ ಸಹಕಾರಿ ರೆಜಿಸ್ಟ್ರಾರ್ ಮತ್ತು ಮೀನುಗಾರಿಕಾ ಇಲಾಖೆ ನಿರ್ದೇಶಕರಿಗೆ ಆಯೋಗ ಕಮೀಷನರ್ ಆದೇಶ ನೀಡಿದ್ದಾರೆ.
ಕಾಸರಗೋಡು ಸರಕಾರಿ ಅತಿಥಿಗೃಹದಲ್ಲಿ ನಡೆದ ಆಯೋಗದ ಅದಾಲತ್‍ನಲ್ಲಿ ಅಧ್ಯಕ್ಷತೆ ವಹಿಸಿದ ಕಮೀಷನರ್ ನ್ಯಾಯಮೂರ್ತಿ ಪಿ.ಎಸ್.ಗೋಪಿನಾಥ್ ಈ ಆದೇಶ ನೀಡಿದರು.
ಮೀನುಗಾರರ ಸಾಲ ಮರುಪಾವತಿ ಆಯೋಗ 2012 ರಿಂದ ಪರಿಶೀಲಿಸಿ ತೀರ್ಪು ನೀಡಿದ ಸಾಲ ಮರುಪಾವತಿಗೆ ಕಾಲಾವಕಾಶ ನೀಡಿದ ಪ್ರಕರಣಗಳಲ್ಲಿ ಈ ಆದೇಶ ನೀಡಲಾಗಿದೆ. ಅದಾಲತ್‍ನಲ್ಲಿ ಹಾಜರಾದ 16 ಮೀನುಗಾರರ ಅರ್ಜಿಗಳನ್ನು ಅದಾಲತ್‍ನಲ್ಲಿ ಪರಿಶೀಲಿಸಲಾಯಿತು. ಜಿಲ್ಲಾ ಸಹಕಾರಿ ಸಂಘ ರೆಜಿಸ್ಟ್ರಾರ್ ಬೆನ್ನಿ ಜೋಸೆಫ್, ಸಹಾಯಕ ನಿರ್ದೇಶಕ ಪಿ.ಬಾಬುರಾಜನ್, ಆಯೋಗ ನಿರೀಕ್ಷಕ ಆರ್.ಗಂಗಾಧರನ್, ವಿವಿಧ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.