ನಾಳೆ ಗೇರುಬೀಜ ಮೇಳ ಆರಂಭ
0
ಡಿಸೆಂಬರ್ 03, 2018
ಕಾಸರಗೋಡು : ಕುಟುಂಬಶ್ರೀ ಸ್ವಾಮ್ಯದಲ್ಲಿ ಚಟುವಟಿಕೆ ನಡೆಸುತ್ತಿರುವ ಮಹಿಳೆಯರಿಂದ ನಡೆಸಲ್ಪಡುವ ಗೇರುಬೀಜ ಪರಿಷ್ಕರಣೆ ಸಂಘಟನೆ ಸಫಲಂ ವತಿಯಿಂದ ಜಿಲ್ಲೆಯ ವಿವಿಧೆಡೆ ಮೆಗಾ ಕ್ಯಾಶ್ಯೂ ಫೆಸ್ಟ್ (ಗೇರುಬೀಜ ಮೇಳ) ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆ ಡಿ.4ರಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡು ಸಿವಿಲ್ ಸ್ಟೇಷನ್ ಆವರಣದಲ್ಲಿ ನಡೆಯಲಿದ್ದು, ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ಚಾಲನೆ ನೀಡುವರು. ಈ ಮೇಳದಲ್ಲಿ ಗೇರುಬೀಜದ 20 ಗ್ರೇಡ್ಗಳ , ಗೇರುಬೀಜ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಮಾರಾಟದಲ್ಲಿ ಶೇ 15 ರಿಯಾಯಿತಿ ಇರುವುದು.
ಡಿ.6 ವರೆಗೆ ಈ ಮೇಳ ನಡೆಯಲಿದ್ದು, ಕಾಞಂಗಾಡು ಮಿನಿ ಸಿವಿಲ್ ಸ್ಟೇಷನ್ನಲ್ಲಿ ಡಿ.5ರಿಂದ 7 ವರೆಗೆ , ಚೆಂಬರಿಕ್ಕ ಬೀಚ್, ಬೇಕಲ್ ಬೀಚ್ ಮೊದಲಾದೆಡೆ ಡಿ.7ರಿಂದ 9 ವರೆಗೆ ಫೆಸ್ಟ್ ನಡೆಯಲಿದೆ.