ಹೊಸವರ್ಷಾಚರಣೆ : ಹೆಸರು ಸೂಚಿಸಿ ಬಹುಮಾನ ಪಡೆಯಿರಿ
0
ಡಿಸೆಂಬರ್ 05, 2018
ಕಾಸರಗೋಡು: ಜಿಲ್ಲಾಡಳಿತೆ ಮತ್ತು ಕಾಸರಗೋಡು ಥಿಯೇಟರಿಕ್ಸ್ ಕ್ಲಬ್ ಜಂಟಿ ವತಿಯಿಂದ ಡಿ.31ರಂದು ಕಾಸರಗೋಡಿನಲ್ಲಿ ನಡೆಸುವ ಹೊಸವರ್ಷಾಚರಣೆ ಕಾರ್ಯಕ್ರಮಕ್ಕೆ ಹೆಸರೊಂದನ್ನು ಸೂಚಿಸುವಂತೆ ಕೋರಲಾಗಿದೆ. ಕಾಸರಗೋಡಿನ ಸಾಂಸ್ಕೃತಿಕತೆಗೆ ಹೊಂದುವ, ಹೊಸವರ್ಷಾಚರಣೆಗೆ ಅನ್ವಯವಾಗುವಂಥಾ ಹೆಸರು ನೀಡುವಂತೆ ಕೋರಲಾಗಿದೆ. ಆಯ್ಕೆಯಾದ ಹೆಸರು ಒದಗಿಸಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು. ಡಿ.10ರ ಮುಂಚಿತವಾಗಿ ಹೆಸರನ್ನು ಕಾರ್ಯದರ್ಶಿ, ಕಾಸರಗೋಡು ಥಿಯೇಟರಿಕ್ಸ್ ಕ್ಲಬ್, ಜಿಲ್ಲಾಧಿಕಾರಿ ಕಚೇರಿ, ಕಾಸರಗೋಡು ಎಂಬ ವಿಳಾಸಕ್ಕೆ ಕಳುಹಿಸಬೇಕು. ವಾಟ್ಸ್ ಆಪ್ ಸಂಖ್ಯೆ 8129850000 ಮೂಲಕವೂ ವ್ಯವಹರಿಸಬಹುದು.