ಕುಂಬಳೆ: ಪುತ್ತಿಗೆ ಗ್ರಾಮಪಂಚಾಯತಿ 2018-19ವಾರ್ಷಿಕ ಯೋಜನೆ ಅಂಗವಾಗಿ ಮಹಿಳೆಯರಿಗೆ ಏಕದಿನ ಜೆಂಡರ್ ತರಬೇತಿ ಕಾರ್ಯಕ್ರಮ ಶನಿವಾರ ನಡೆಯಿತು.
ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಅರುಣಾ ಜೆ. ತರಬೇತಿ ಉದ್ಘಾಟಿಸಿದರು. ಉಪಾಧ್ಯಕ್ಷ ಪಿ.ಬಿ.ಮಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷರಾದ ಜಯಂತಿ, ಚನಿಯ ಪಾಡಿ, ಶಾಂತಿ ವೈ. ಕುಟುಂಬಶ್ರೀ ಅಧ್ಯಕ್ಷೆ ಸುಂದರಿ, ಸಹಾಯಕ ಕಾರ್ಯದರ್ಶಿ ಸುರೇಶ್ ಕೆ.ಆರ್., ಐ.ಸಿ.ಡಿ.ಎಸ್.ಮೇಲ್ವಿಚಾರಕಿ ಅಂಬಿಕಾ ಟಿ.ಪಿ., ಗ್ರಾಮಪಂಚಾಯತಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಗಂಗಾಧರನ್, ನ್ಯಾಯವಾದಿ ಶ್ಯಾಮಲಾದೇವಿ, ಅನುಪಮಾ, ಉಷಾದೇವಿ ವಿವಿಧ ವಿಷಯಗಳಲ್ಲಿ ತರಗತಿ ನಡೆಸಿದರು.