ಬದಿಯಡ್ಕ : ನೀಚರ್ಾಲು ಸಮೀಪದ ಮಾನ್ಯದ ಯಕ್ಷಮಿತ್ರ ಸಾಂಸ್ಕೃತಿಕ ಸಂಘ, ಪುತ್ತೂರು ಸಾಹಿತ್ಯ ವೇದಿಕೆ, ಉಪ್ಪಿನಂಗಡಿಯ ಸತ್ಯಶಾಂತ ಪ್ರೊಡಕ್ಷನ್ ಹಾಗೂ ಕೆದಿಲಾಯ ಪ್ರತಿಷ್ಠಾನ ಕಾಸರಗೋಡು ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ಜ್ಯೋತಿಷಿ ಪುದುಕೋಳಿ ಕೃಷ್ಣಮೂತರ್ಿ ಅವರ ಶೇಷ ಸಭಾಭವನದಲ್ಲಿ ಡಿ.2ರಂದು ಬೆಳಗ್ಗೆ 9ರಿಂದ ಕನ್ನಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ವಿವಿಧ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಿಸ್ ಮಾಡ್ಬೇಡಿ:
ವಾರದಲ್ಲೊಂದು ಭಾನುವಾರ! ಏನ್ ಮಾಡೋದು ಎನ್ನುವವರಿಗೆ ಭಾಷೆ, ಸಂಸ್ಕೃತಿಯ ಒಂದಷ್ಟು ಅರಿವಿಗೆ, ಪ್ರೋತ್ಸಾಹ ನೀಡಬೇಕೆಂಬ ಇಂಗಿತವಿರುವ ಮನಸ್ಸುಗಳಿಗೆ ನಾಳಿನ ಕಾರ್ಯಕ್ರಮ ಭರಪೂರ ತೃಪ್ತಿ ನೀಡಲಿದೆ. ಜೊತೆಗೆ ಮಕ್ಕಳನ್ನೂ ಎಳೆದು ತರುವುದು ಅಗತ್ಯವಿದ್ದು, ಇದು ಹೊಸ ಪೀಳಿಗೆಯ ತಯಾರಿಗೆ ಬಲ ನೀಡಲಿದೆ. ಆದುದರಿಂದ ಎಲ್ಲರೂ ಮುಕ್ತ ಮನಸ್ಸುಗಳಿಂದ ಪಾಲ್ಗೊಳ್ಲಬೇಕೆಂದು ಸಂಘಟಕರು ಕಳಕಳಿಯಿಂದ ವಿನಂತಿಸುತ್ತಾರೆ.
ಪ್ರಕೃತಿಯ ಮಡಿಲು ಶೇಷ ನಿವಾಸ:
ಸಾಮಾನ್ಯವಾಗಿ ಸಾಹಿತ್ಯ, ಕಲಾ ಪ್ರದರ್ಶನಗಳು ಈಗೀಗ ಹಳ್ಳಿಗಳಿಗಿಮತ ಬಲುದೂರ ಪೇಟೆಯಲ್ಲಿ ವ್ಯವಸ್ಥೆಗಳ ಸುಗಮತೆಯ ಹೆಸರಲ್ಲಿ ನಡೆಸಲಾಗುತ್ತಿದೆ. ಕಾಲಧರ್ಮಕ್ಕನುಸರಿಸಿ ಒಪ್ಪಬೇಕಾದುದಾದರೂ ಕೃತಕತೆಯ ಮಧ್ಯೆ ಕೃತಾರ್ಥತೆಯೇ ಮೂಡುವುದಿಲ್ಲ.
ಆದರೆ ಪುದುಕೋಳಿಯ ನಾಳಿನ ಕಾರ್ಯಕ್ರಮ ನಡೆಯುವ ಶೇಷ ನಿವಾಸ ಅಪ್ಪಟ ಹಳ್ಳಿ ವಾತಾವರಣದ್ದು. ಅಲ್ಲ...ಗ್ರಾಮೀಣ ಪ್ರದೇಶವೇ ಹೌದು. ಡಾಮರು ರಸ್ತೆ ಹತ್ತಿರದಲ್ಲೇ ಹಾದು ಹೋಗುವುದಾದರೂ ದೊಡ್ಡ ಭರಾಟೆಯೇನೂ ಇಲ್ಲಿಲ್ಲ. ಮಿಕ್ಕುಳಿದಂತೆ ತೆಂಗು-ಕಂಗು-ಬಾಳೆ-ಗೇರು ಮರಗಳ ಸಹಿತ ತಣ್ನನೆಯ ವಾತಾವರಣ ಇಲ್ಲಿಯದು. ಅದು ಕೃತಕ ಅಲ್ಲ ಮರರ್ೆ. ಒರಿಜಿನಲ್. ಅಂಬಾ ಎನುವ ಹಸುಗಳು-ಹಟ್ಟಿ, ಚಿಲಿಪಿಲಿ ಗುಟ್ಟುವ ಹಕ್ಕಿಗಳು, ಬೊಗಳುವ ನಾಯಿಗಳು ಎಲ್ಲಾ ಇಲ್ಲಿವೆ.
ಜೊತೆಗೆ.........ಎಲ್ಲಾ ಮೊಬೈಲ್ ಗಳ ರೇಂಜ್ ಕೂಡಾ ಲಭ್ಯವಿದೆ....ಏನು...ಗಾಬರಿ ಬೇಡ!
ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್ ಜಿ ಸಿದ್ಧರಾಮಯ್ಯ ಉದ್ಘಾಟಿಸುವರು. ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಹರಿಕೃಷ್ಣ ಭರಣ್ಯ ಅಧ್ಯಕ್ಷತೆ ವಹಿಸುವರು. ಕಟೀಲು ಕ್ಷೇತ್ರದ ಆನುವಂಶಿಕ ಮುಕ್ತೇಸರ ಕಮಲಾದೇವಿ ಅಸ್ರಣ್ಣ ದೀಪಜ್ವಲನೆ ಮಾಡುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದಶರ್ಿ ಡಾ. ಮುರಳೀಧರ, ಶಿಕ್ಷಣ ತಜ್ಞ ವಿ ಬಿ ಕುಳಮರ್ವ, ಮುಂಬೈನ ಪಿಂಗಾರ ಪತ್ರಿಕೆಯ ಸಂಪಾದಕ ರೆಮಂಡ್ ಡಿ'ಕುನ್ನಾ, ಸಾಹಿತಿ ಬನದಗದ್ದೆ ಪ್ರಭಾಕರ ಕಲ್ಲೂರಾಯ, ವಕೀಲ ಸಂಕಪ್ಪ ಉಡುಪಿ, ವಾಸ್ತುತಜ್ಞೆ ಸವಿತಾ ಹಸದಗುಪ್ಪೆ ಶ್ರೀರಂಗಪಟ್ಟಣ, ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಎನ್ ಕೃಷ್ಣ ಭಟ್ ಮೊದಲಾದವರು ಭಾಗವಹಿಸುವರು. ಈ ಸಂದರ್ಭದಲ್ಲಿ ಹಿರಿಯ ವಿದ್ವಾಂಸ ವಿ ಬಿ ಅತರ್ಿಕಜೆ ಅವರು ಸಾಧನೆಯ ಹಾದಿ (ಶಾಂತಾ ಕುಂಟಿನಿ) ಕೃತಿ ಬಿಡುಗಡೆ ಹಾಗೂ ಅಕ್ಷರ ಮಿಥುನ (ಪುರುಷೋತ್ತಮ ಭಟ್ ಮತ್ತು ಅಕ್ಷತಾ ಪುದುಕೋಳಿ) ಕೃತಿಗಳ ವಿಮಶರ್ೆಯನ್ನು ಡಾ.ರಾಧಾಕೃಷ್ಣ ಬೆಳ್ಳೂರು ನಿರ್ವಹಿಸುವರು.
ಯುವ ಪ್ರತಿಭೆಗಳಾದ ಸ್ವಸ್ಥಿಶ್ರೀ ಮಂಗಳೂರು, ಪ್ರೀತಾಲಿ ಶೆಟ್ಟಿ ಮಂಗಳೂರು, ಶ್ರೇಯಾ ಕಲ್ಲೂರಾಯ, ಆದಿತ್ಯ ಎಸ್ ಆರ್, ಸಮನ್ವಿತಾ ಗಣೇಶ್, ಪ್ರಣಮ್ಯ ಎಂ ಕಾಟುಕುಕ್ಕೆ, ಉಪಾಸನಾ , ವೈಷ್ಣವಿ ಮಾನ್ಯ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಗಾನಮಂಜುಷಾ ಬಳಗದವರಿಂದ ನೃತ್ಯ ವೈವಿಧ್ಯ ನಡೆಯಲಿದೆ. ಈ ಸಂದರ್ಭದಲ್ಲಿ ಅನುಪಮಾ ಪಿ ಜಿ (ಕಲಾಸಿರಿ ಪ್ರಶಸ್ತಿ), ವಿಜಯ ಸುಬ್ರಹ್ಮಣ್ಯ (ಸೇವಾಸಿರಿ ಪ್ರಶಸ್ತಿ), ಶಾಂತಾ ರವಿ ಕುಂಟಿನಿ (ಸಾಹಿತ್ಯ ಸಿರಿ ಪ್ರಶಸ್ತಿ) ಇವರನ್ನು ಗೌರವಿಸಲಾಗುವುದು. ನಂತರ ನಡೆಯುವ ಬಾಲ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸನ್ನಿಧಿ ಟಿ ರೈ ಪೆರ್ಲ, ಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಿರಾಜ್ ಅಡೂರು, ಮಹಿಳಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಶಾಂತಾ ಕುಂಟಿನಿ ಹಾಗೂ ಹಿರಿಯ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ರಾಧಾಕೃಷ್ಣ ಬೆಳ್ಳೂರು ವಹಿಸಲಿದ್ದಾರೆ. ಒಟ್ಟು ಸುಮಾರು 65ಕ್ಕೂ ಮಿಕ್ಕಿದ ಕವಿಗಳು ಕವನವಾಚನ ಮಾಡಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜ್ಯೋತಿಷಿ ಕೃಷ್ಣಮೂತರ್ಿ ಪುದುಕೋಳಿ ವಹಿಸುವರು. ಕನರ್ಾಟಕ ಸಕರ್ಾರದ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ವೆಂಕಟಲಕ್ಷ್ಮಿ ಬಸವಲಿಂಗರಾಜು, ದಕ್ಷಿಣಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರಾ, ಬದಿಯಡ್ಕ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ, ಹಿರಿಯ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ, ಖ್ಯಾತ ಚಿತ್ರಕಲಾವಿದ ಪಿ ಎಸ್ ಪುಂಚಿತ್ತಾಯ, ಕಮರ್ಾರು ಕ್ಷೇತ್ರ ಸಮಿತಿ ಅಧ್ಯಕ್ಷ ಪುದುಕೋಳಿ ಕೃಷ್ಣ ಭಟ್, ಪುತ್ತೂರು ಸಾಹಿತ್ಯ ವೇದಿಕೆಯ ಮುಖಂಡರಾದ ಕಿಶೋರ್ ಕುಮಾರ್, ಶ್ಯಾಮಸುದರ್ಶನ ಹೊಸಮೂಲೆ, ಕಥಾಬಿಂದು ಸಾಹಿತ್ಯ ವೇದಿಕೆಯ ಅಧ್ಯಕ್ಷ ಪ್ರದೀಪ ಕುಮಾರ್ ಮಂಗಳೂರು, ಬದಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯೆ ಪ್ರೇಮಾ ರವೀಂದ್ರನ್ ಭಾಗವಹಿಸುವರು. ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿವರ್ಾಹಕ ಡಾ. ಸದಾನಂದ ಪೆರ್ಲ ಆಶಯ ನುಡಿ ನಿರ್ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಾಸರಗೋಡು ಹಾಗೂ ಕನರ್ಾಟಕದಿಂದ ಅನೇಕ ಮಂದಿ ಸಾಹಿತ್ಯಾಭಿಮಾನಿಗಳು ಹಾಗೂ ಸಾಹಿತಿಗಳು ಭಾಗವಹಿಸಲಿದ್ದಾರೆ. ಕೃಷ್ಣಮೂತರ್ಿ ಪುದುಕೋಳಿ, ಸುಂದರ ಶೆಟ್ಟಿ ಕೊಲ್ಲಂಗಾನ, ವಿಜಯಕುಮಾರ್ ಮಾನ್ಯ, ಪುಂಡೂರು ಪ್ರಭಾವತಿ ಕೆದಿಲಾಯ, ಶಾಂತಾ ಕುಂಟಿನಿ, ಎಚ್ ಭೀಮರಾವ್ ವಾಷ್ಠರ್ ಸುಳ್ಯ, ವಿದ್ಯಾಗಣೇಶ್ ಅಣಂಗೂರು, ಮಲ್ಲಿಕಾ ಜೆ ರೈ ಪುತ್ತೂರು, ಅಕ್ಷತಾ ರಾಜ್ ಪೆರ್ಲ ಮೊದಲಾದವರು ನೇತೃತ್ವ ವಹಿಸಲಿದ್ದಾರೆ.
ದಾರಿ:
ಮಂಗಳೂರಿನಿಂದ ಆಗಮಿಸುವವರು ಕುಂಬಳೆಯಲ್ಲಿ ಬಸ್ಸಿಳಿದು ಬಳಿಕ ಮುಳ್ಳೇರಿಯ-ಬದಿಯಡ್ಕ ಬಸ್ಸು ಹಿಡಿದು ನೀಚರ್ಾಲಲ್ಲಿ ಇಳಿಯಬೇಕು.ಅಲ್ಲಿಂದ ಮಾನ್ಯ-ವಿದ್ಯಾನಗರ ರಸ್ತೆಯಲ್ಲಿ ಒಂದೂವರೆ ಕಿ.ಮೀ. ಸಂಚರಿಸಿದರೆ ಪುದುಕೋಳಿ ಶೇಷ ನಿಲಯ ರಸ್ತೆ ಬದಿ ಕಂಡುಬರುತ್ತದೆ. ಪುತ್ತೂರು ಪರಿಸರದಿಂದ ಆಗಮಿಸುವವರು ಕಾಸರಗೋಡು ಬಸ್ ಮೂಲಕ ಬದಿಯಡ್ಕದಿಂದ ಕುಂಬಳೆಗೆ ತೆರಳುವ ಬಸ್ಸ್ ಮೂಲಕ ನೀಚರ್ಾಲಿನಲ್ಲಿ ಇಳಿದು ತೆರಳಬಹುದು. ಸುಳ್ಯದಿಂದ ಆಗಮಿಸುವವರು ಮುಳ್ಳೇರಿಯ ಬದಿಯಡ್ಕ ನೀಚರ್ಾಲು ಹಾಗೂ ಕಾಸರಗೊಡಿನಿಮದ ಆಗಮಿಸುವವರು ಕಾಸರಗೊಡು ಮುಮಡಿತ್ತಡ್ಕ ಬಸ್ಸ್ ಮೂಲಕ ಬರಬಹುದಾಗಿದೆ.
ಕಾರ್ಯಕ್ರಮ ವ್ಯವಸ್ಥೆಗಳು ಈಗಾಗಲೇ ಪೂತರ್ಿಗೊಂಡಿದ್ದು, ದಿನಪೂತರ್ಿ ತಿಂಡಿ-ಪಾನೀಯ ಹಾಗೂ ಭೋಜನದ ವ್ಯವಸ್ಥೆಗಳು ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.