ರಸ್ತೆ ಕಾಂಕ್ರೀಟ್ ಕಾಮಗಾರಿ ವೀಕ್ಷಣೆ
0
ಡಿಸೆಂಬರ್ 04, 2018
ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ 5 ನೇ ಶಿವಗಿರಿ ವಾರ್ಡಿನ ಅಡ್ಕ, ಕೆಜಕ್ಕಾರ್,ಶೇಡಿಮೂಲೆ ರಸ್ತೆಗೆ ಗ್ರಾಮ ಪಂಚಾಯತಿಯ 2018-2019ರ ವಾರ್ಷಿಕ ಯೋಜನೆಯಲ್ಲಿ ಸದಸ್ಯ ಪುಟ್ಟಪ್ಪ ಕೆ ಖಂಡಿಗೆ ಇವರು ಅನುದಾನ ಒದಗಿಸಿದ ಆರು ಲಕ್ಷ ರೂ.ಗಳ ಕಾಂಕ್ರಿಟ್ ಕಾಮಗಾರಿಗೆ ಇತ್ತೀಚೆಗೆ ಚಾಲನೆಯನ್ನು ನೀಡಲಾಯಿತು. ಗ್ರಾಮ ಪಂಚಾಯತಿ ಓವರ್‍ಸಿಯರ್ ಪ್ರದೀಪ್ ಮತ್ತು ಗ್ರಾ.ಪಂ. ಸದಸ್ಯರು ಕಾಮಗಾರಿಯನ್ನು ವಿಕ್ಷೀಸಿದರು.