ಬ್ಯೂರಿಸ್ ಐರಿಸ್: ಜಿ20 ಶೃಂಗಸಭೆಗೆ ಹಾಜರಾಗಲು ಅಜರ್ೆಂಟೀನಾಗೆ ಮೂರು ದಿನಗಳ ಅಧಿಕೃತ ಭೇಟಿ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಯೋತ್ಪಾದನೆ ಮತ್ತು ತೀವ್ರಗಾಮಿತನವು ಜಾಗತಿಕ ಬೆದರಿಕೆಗಳಾಗಿದೆ ಎಂದಿದ್ದಾರೆ.
ಜಿ20 ಶೃಂಗದ ಹೊರಗೆ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ನಾಯಕರೊಡನೆ ಅನೌಪಚಾರಿಕ ಮಾತುಕತೆ ನಡೆಸಿರುವ ಮೋದಿ ಆಥರ್ಿಕ ಅಪರಾಧ ಸಹ ಬಹುದೊಡ್ಡ ಜಾಗತಿಕ ಸಮಸ್ಯೆಯಾಗಿದ್ದು ಕಪ್ಪು ಹಣದ ನಿಯಂತ್ರಣಕ್ಕೆ ವಿಶ್ವ ನಾಯಕರು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.
ಬ್ರಿಕ್ಸ್ ಒಂದು ಜಾಗತಿಕ ಬೆಳವಣಿಗೆಯ ಎಂಜಿನ್ ಂದ ಮೋದಿ ಉತ್ತಮ ಅಭಿವೃದ್ದಿಗೆ ಒಟ್ಟಾಗಿ ಕೆಲಸ ಮಾಡಲು ಕರೆ ನೀಡಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ರವೀಶ್ ಕುಮಾರ್ ಈ ಸಂಬಂಧ ಟ್ವೀಟ್ ನಲ್ಲಿ ವಿವರಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ಅಲ್ವೆರ್ ಪ್ಯಾಲೇಸ್ ಹೋಟೆಲ್ನಲ್ಲಿ ಬ್ರಿಕ್ಸ್ ನಾಯಕರ ಅನೌಪಚಾರಿಕ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಎರಡನೇ ದಿನವನ್ನು ಪ್ರಾರಂಭಿಸಿದರು. ಸಭೆಯ ನಂತರ, ಪ್ರಧಾನಿ ಮೋದಿ ಜಿ20 ಶೃಂಗಸಭೆ ಸ್ಥಳಕ್ಕೆ ಆಗಮಿಸಲಿದ್ದಾರೆ.
ಪ್ರಧಾನಮಂತ್ರಿ ಅವರು 'ಪುಟ್ಟಿಂಗ್ ಪೀಪಲ್ ಫಸ್ಟ್' ಎಂಬ ಶೀಷರ್ಿಕೆಯ ಮೊದಲ ಅಧಿವೇಶನದಲ್ಲಿ ಪ್ರಮುಖ ಭಾಷಣಕಾರರಾಗಿದ್ದಾರೆ, ಅಲ್ಲಿ ಅವರು ಮಹಿಳಾ ಸಬಲೀಕರಣದ ವಿಷಯದಲ್ಲಿ ಮಾತನಾಡಲಿದ್ದಾರೆ.
ಪ್ರಧಾನ ಮಂತ್ರಿಯು ಚೀನಾ ಅಧ್ಯಕ್ಷ ಕ್ಸಿ ಜೊತೆಗಿನ ಸಭೆಯಲ್ಲಿ ಸಹ ಪಾಲ್ಗೊಳ್ಳುವವರಿದ್ದಾರೆ ಅಲ್ಲದೆ ಚಿಲಿಯ ನೂತನ ಅಧ್ಯಕ್ಷರೊಡನೆ ಸಹ ಮಾತುಕತೆ ನಡೆಸಲಿದ್ದಾರೆ. ಸಂಜೆ ರಷ್ಯಾ, ಭಾರತ, ಚೀನಾ (ಆರ್ಐಸಿ) ಅನೌಪಚಾರಿಕ ಶೃಂಗಸಭೆ ಇರುತ್ತದೆ, ಅದರ ನಂತರ ಸಾಂಸ್ಕೃತಿಕಕಾರ್ಯಕ್ರಮ, ನಾಯಕರಿಗೆ ವಿಶೇಷ ಭೋಜನವಿರಲಿದೆ.ಇದಲ್ಲದೆ, ಪ್ರಧಾನಿ ಮೋದಿ ಅವರು ಜಪಾನ್, ಅಮೆರಿಕಾ ಮತ್ತು ಭಾರತ ನಡುವಿನ ಮೊದಲ ತ್ರಿಪಕ್ಷೀಯ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ.