HEALTH TIPS

ನೀರ್ಚಾಲು ಹವ್ಯಕ ವಲಯದ ವತಿಯಿಂದ ಗೌರವಾಭಿನಂದನೆ

ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲದ ನೀರ್ಚಾಲು ವಲಯದಲ್ಲಿ ಅನೇಕ ವರ್ಷಗಳ ಕಾಲ ಗುರಿಕ್ಕಾರರಾಗಿ ಸೇವೆ ಸಲ್ಲಿಸಿದ ಕುಳಮರ್ವ ಶಾಮ ಭಟ್ ಅವರನ್ನು ನೀರ್ಚಾಲು ವಲಯದ ವತಿಯಿಂದ ಇತ್ತೀಚೆಗೆ ಬಡಗಮೂಲೆಯಲ್ಲಿ ನಡೆದ ವಲಯ ಸಭೆಯ ಸಂದರ್ಭದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾರ್ಗದರ್ಶನ ನೀಡಲು ಆಗಮಿಸಿದ ಮಹಾಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು ಶಾಲು ಹೊದೆಸಿ ಸ್ಮರಣಿಕೆಯನ್ನಿತ್ತು ಸನ್ಮಾನಿಸಿದರು. ಅವರು ಮಾತನಾಡುತ್ತಾ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆದರೆ ಜೀವನದಲ್ಲಿ ಜಯಿಸಲು ಸಾಧ್ಯ. ಪುರಾತನ ಆಚಾರಗಳನ್ನು ಕೈಬಿಡದೆ ಗುರುಹಿರಿಯರನ್ನು ಗೌರವಿಸುವ ಕಾರ್ಯ ಶ್ಲಾಘನೀಯವಾಗಿದೆ. ಹಿಂದಿನ ಕಾಲದಿಂದಲೇ ಆಚರಿಸಿಕೊಂಡು ಬಂದ ನಮ್ಮ ಸಂಸ್ಕøತಿಯನ್ನು ಉಳಿಸಬೇಕಾದ ಕರ್ತವ್ಯ ನಮ್ಮ ಮುಂದಿದೆ ಎಂದರು. ನೀರ್ಚಾಲು ವಲಯ ಅಧ್ಯಕ್ಷ ಜಯದೇವ ಖಂಡಿಗೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ವಲಯ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಕಕ್ಕಳ, ಕೋಶಾಧಿಕಾರಿ ಈಶ್ವರ ಭಟ್ ಹಳೆಮನೆ, ಉಪಾಧ್ಯಕ್ಷೆ ಕನಕವಲ್ಲಿ, ಗುರಿಕ್ಕಾರರು, ವಲಯ ಪದಾಧಿಕಾರಿಗಳು, ಶ್ರೀಕಾರ್ಯಕರ್ತರು ಉಪಸ್ಥಿತರಿದ್ದರು. ಮನೆಯವರಾದ ಈಶ್ವರ ಭಟ್ ಬಡಗಮೂಲೆ ದಂಪತಿಗಳು ಅತಿಥಿಗಳನ್ನು ಸತ್ಕರಿಸಿದರು. ಈ ಸಂದರ್ಭದಲ್ಲಿ ಭಜನ ರಾಮಾಯಣ ಪಾರಾಯಣ ನಡೆಸಲಾಯಿತು. ಮುಳ್ಳೇರಿಯ ಹವ್ಯಕ ಮಂಡಲದ ನೀರ್ಚಾಲು ವಲಯದಲ್ಲಿ ಅನೇಕ ವರ್ಷಗಳ ಕಾಲ ವೈದಿಕ ವೃತ್ತಿಯನ್ನು ಕೈಗೊಂಡು ಸಮಾಜಕ್ಕೆ ಮಾರ್ಗದರ್ಶಕರಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಿದ ವೇದಮೂರ್ತಿ ಮಹಾಬಲ ಭಟ್ ಕಿಳಿಂಗಾರು ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಮುಳ್ಳೇರಿಯ ಮಂಡಲ ಶಿಷ್ಯ ಮಾಧ್ಯಮ ಪ್ರಧಾನ ಸರಳಿ ಮಹೇಶ, ವಲಯ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಕಕ್ಕಳ, ಕೋಶಾಧಿಕಾರಿ ಈಶ್ವರ ಭಟ್ ಹಳೆಮನೆ, ವೈದಿಕ ಪ್ರಧಾನ ಶಂಕರನಾರಾಯಣ ಭಟ್ ನಿಡುಗಳ, ಸಂಸ್ಕಾರ ಪ್ರಧಾನ ಉದಯಶಂಕರ ಕೆ.ಎಂ., ವಲಯ ಶಿಷ್ಯ ಮಾಧ್ಯಮ ಪ್ರಧಾನ ಮಹೇಶ ಕೃಷ್ಣ ತೇಜಸ್ವಿ ಜೊತೆಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries