`ಸೈಬರ್ ಕ್ರೈಂ ಮತ್ತು ಜಾಗೃತಿ' ಕಾರ್ಯಾಗಾರ
0
ಡಿಸೆಂಬರ್ 05, 2018
ಬದಿಯಡ್ಕ: ಬದಿಯಡ್ಕ ಕ್ರಿಯೇಟಿವ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಮತ್ತು ಬದಿಯಡ್ಕ ಪೆÇಲೀಸ್ ಠಾಣೆ ಇದರ ಜಂಟಿ ಆಶ್ರಯದಲ್ಲಿ `ಸೈಬರ್ ಕ್ರೈಂ ಮತ್ತು ಜಾಗೃತಿ' ಎಂಬ ವಿಷಯದಲ್ಲಿ ಮಾಹಿತಿ ಕಾರ್ಯಾಗಾರ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಕಾಸರಗೋಡು ಜಿಲ್ಲಾ ಸೈಬರ್ ಸೆಲ್‍ನಲ್ಲಿ ಸುಮಾರು 5 ವರ್ಷಕ್ಕಿಂತಲೂ ಅಧಿಕ ಕಾಲ ಸೇವೆ ಸಲ್ಲಿಸಿ ಇದೀಗ ಬದಿಯಡ್ಕ ಠಾಣೆಯಲ್ಲಿ ಕಾರ್ಯನಿರತರಾಗಿರುವ ಬದಿಯಡ್ಕ ಸಿಪಿಒ ಶ್ರೀಕಾಂತ್ ಪಿ.ಆರ್. ಅವರು ಪ್ರಸ್ತುತ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲದ ಉಪಯೋಗ, ಸುರಕ್ಷತೆ ಹಾಗೂ ಅಪರಾಧಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಶಿವದಾಸ್ ಸಿ.ಎಚ್. ವಹಿಸಿದ್ದು, ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ರಂಗ ಶರ್ಮ ಉಪ್ಪಂಗಳ ಉಪಸ್ಥಿತರಿದ್ದು ಶುಭಹಾರೈಸಿದರು. ಸುಮಾರು 375 ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು. ಕಾಲೇಜು ನೌಕರ ಸಂಘದ ಕಾರ್ಯದರ್ಶಿ ಪ್ರಕಾಶ್ ಎಂ.ಎಸ್. ಸ್ವಾಗತಿಸಿ, ವಿದ್ಯಾರ್ಥಿ ನಾಯಕ ಶೆಬೀರ್ ವಂದಿಸಿದರು.