ಮಂಜೇಶ್ವರ: ಮಹಿಳೆಯರು ಪ್ರಸ್ತುತ ಅನುಭವಿಸುತ್ತಿರುವ ಸ್ವಾತಂತ್ರ್ಯ, ಆಚಾರ ವಿಚಾರ ಪರಿಪಾಲನೆಯಲ್ಲಿನ ಪರಿಷ್ಕಾರಗಳು ಯಾರದ್ದೇ ಉದಾರತೆಯಿಂದ ದೊರತದ್ದಲ್ಲ. ನವೋತ್ಥಾನ ನಾಯಕರಾದ ರಾಜಾರಾಮ ಮೋಹನ ರಾಯ್, ಸ್ವಾಮಿ ವಿವೇಕಾನಂದ, ಚಟ್ಟಂಬಿ ಸ್ವಾಮಿ, ಶ್ರೀನಾರಾಯಣ ಗುರು, ಕೃಷ್ಣ ಪಿಳ್ಳೆ ಮೊದಲಾದ ಹೋರಾಟಗಾರರ ಸಂಘಟಿತ ವಯತ್ನಗಳಿಂದ ದೊರಕಿದ ಕೊಡುಗೆಗಳಾಗಿದೆ. ಮಹಿಳೆ ಸಬಲೆ ಎನ್ನುವುದನ್ನು ತೋರಿಸಿಕೊಡುವ ಈನ ಕಾಲಘಟ್ಟದಲ್ಲಿ ಅವರನ್ನು ಮತ್ತೆ ಶತಮಾನದಷ್ಟು ಹಿಂದಕ್ಕೆ ತಳ್ಳುವ ಪ್ರಯತ್ನವನ್ನು ಮಹಿಳೆಯರೆಲ್ಲ ಪ್ರತಿಭಟಿಸಬೇಕು ಎಂದು ಜನಾಧಿಪತ್ಯ ಮಹಿಳಾ ನಾಯಕಿ ಬೇಬಿ ಶೆಟ್ಟಿ ಹೇಳಿದರು.
ಮೀಂಜ ಸಮೀಪದ ಅಂಗಡಿಪದವಿನಲ್ಲಿ ಇತ್ತೀಚೆಗೆ ನಡೆದ ಮಹಿಳಾ ಗೋಡೆಯ ಪ್ರಚಾರಾರ್ಥ ನಡೆದ ಕಾಲ್ನಡೆ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.
ಅಯ್ಯಪ್ಪ ಜ್ಯೋತಿ ಬೆಳಗಿಸಲು ಮುಟ್ಟಾದ ಸ್ತ್ರೀಗೆ ಅವಕಾಶ ನೀಡಿರುವಾಗ ಶಬರಿಮಲೆ ಕ್ಷೇತ್ರ ದರ್ಶನಗೈಯ್ಯಲು ಮಹಿಳೆಯರಿಗೇನು ನಿಷೇಧ ಎಂದು ಅವರು ಪ್ರಶ್ನಿಸಿದರು. ಅನಗತ್ಯ ಅಪಪ್ರಚಾರದ ಮೂಲಕ ಮಹಿಳೆಯರನ್ನು ಅವಹೇಳನ ಮಾಡುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ಸ್ತ್ರೀಯರು ವಿಚಾರ ವಿಮರ್ಶೆ ನಡೆಸಬೇಕು ಎಂದು ಅವರು ಕರೆನೀಡಿದರು.
ಮೀಂಜ ಗ್ರಾ.ಪಂ.ಮಾಜಿ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಐರಿನ್ ಜೋಸ್ಟಿನ್, ಸರಸ್ವತಿ ಚಿಗುರುಪಾದೆ, ಕಮಲಾ ಎಸ್, ಶೋಭಾ ಮೀಯಪದವು, ರೋಶನಿ ಬಲ್ಲಂಗುಡೇಲು, ರೇಖಾ ಬೆಜ್ಜ ಮೊದಲಾದವರು ಉಪಸ್ಥಿತರಿದ್ದರು. ಕಮಲ ಸ್ವಾಗತಿಸಿ, ಸರೋಜಿನಿ ವಂದಿಸಿದರು.