ಯುವ ಭಾರತಿ ನಿವೇದಿತಾ ಬಳಗದಿಂದ ಮಾತೃ ಸಮಾವೇಶ, ಧಾರ್ಮಿಕ ಸತ್ಸಂಗ
0
ಡಿಸೆಂಬರ್ 06, 2018
ಉಪ್ಪಳ: ಉಪ್ಪಳ ಅಯ್ಯಪ್ಪ ಮಂದಿರದಲ್ಲಿ ಮಂಡಲ ಕಾಲದ 52 ದಿನಗಳ ಕಾಲ ನಡೆಯುತ್ತಿರುವ ಅನ್ನದಾನದ ಸಂದರ್ಭದಲ್ಲಿ ಯುವ ಭಾರತಿ ಉಪ್ಪಳ ಇದರ ವತಿಯಿಂದ ಪ್ರತಿ ಶನಿವಾರ ನಡೆಯುತ್ತಿರುವ ಧಾರ್ಮಿಕ ಸತ್ಸಂಗ ಕಾರ್ಯಕ್ರಮದ 3 ನೇ ವಾರದ ಕಾರ್ಯಕ್ರಮ ಯುವ ಭಾರತಿ ಮತ್ತು ನಿವೇದಿತಾ ಬಳಗದ ಜಂಟಿ ಆಶ್ರಯದಲ್ಲಿ ಡಿ.8 ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ಉಪ್ಪಳ ಅಯ್ಯಪ್ಪ ಮಂದಿರದಲ್ಲಿ ನಡೆಯಲಿದೆ.
ಧಾರ್ಮಿಕ ಸತ್ಸಂಗ ಕಾರ್ಯಕ್ರಮದಲ್ಲಿ ವಿಶ್ವಹಿಂದೂ ಪರಿಷತ್, ದುರ್ಗಾವಾಹಿನಿ ಮಂಗಳೂರು ವಿಭಾಗ ಸಂಯೋಜಕಿ ನ್ಯಾಯವಾದಿ ವಿದ್ಯಾ ಮಲ್ಯ ಅವರು ಸುಸಂಸ್ಕøತ ಸಮಾಜ ನಿರ್ಮಾಣದಲ್ಲಿ ತಾಯಂದಿರ ಪಾತ್ರ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶ್ವಹಿಂದೂ ಪರಿಷತ್ ಮಾತೃ ಮಂಡಳಿ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ಮೀರಾ ಆಳ್ವ, ಶಬರಿ ಮಾತೃ ಮಂಡಳಿ ಪ್ರಧಾನ ಕಾರ್ಯದರ್ಶಿ ಯೋಗಿನಿ ಶಶಿಕಾಂತ್, ಶಬರಿ ಮಾತೃ ಮಂಡಳಿ ಪ್ರಧಾನ ಕಾರ್ಯದರ್ಶಿ ಗುಣವತಿ ಭಾಸ್ಕರ ಉಪ್ಪಳ, ನಿವೇದಿತಾ ಬಳಗ ಉಪ್ಪಳ ಇದರ ಅಧ್ಯಕ್ಷೆ ಬಾಗ್ಯ ಲಕ್ಷ್ಮಿ ರೈ ಉಪಸ್ಥಿತರಿರುವರು. ಮಾತೆಯರು ಮಹನೀಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕಾಗಿ ಸಂಘಟಕರು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.