ಓಡಂಗಲ್ಲು ಫ್ರೆಂಡ್ಸ್-ಲಕ್ಕೀ ಕೂಪನ್ ಡ್ರಾ
0
ಡಿಸೆಂಬರ್ 03, 2018
ಬದಿಯಡ್ಕ: ಸಾಮಾಜಿಕ ಚಟುವಟಿಕೆಗಳಲ್ಲಿ ಸಂಘ ಸಂಸ್ಥೆಗಳು ತೊಡಗಿಕೊಳ್ಳುವ ಮೂಲಕ ಊರಿನ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಆರಂಭವಾದ ಈ ಸಂಸ್ಥೆಯು ಪ್ರಗತಿಯನ್ನು ಸಾಧಿಸಲಿ ಎಂದು ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಅವರು ಭಾನುವಾರ ವಿದ್ಯಾಗಿರಿ ಓಡಂಗಲ್ಲು ವಿವೇಕಾನಂದ ಫ್ರೆಂಡ್ಸ್ ಸರ್ಕಲ್‍ನ ನೂತನ ಕಟ್ಟಡದ ಬಾಬ್ತು ಧನಸಂಗ್ರಹಕ್ಕಾಗಿ ಹಮ್ಮಿಕೊಂಡ `ಲಕ್ಕೀಕೂಪನ್'ನ ಡ್ರಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದ ಫ್ರೆಂಡ್ಸ್ ಸರ್ಕಲ್‍ನ ಅಧ್ಯಕ್ಷ ನಾರಾಯಣ ವಿ. ಓಡಂಗಲ್ಲು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕಳೆದ 13 ವರ್ಷಗಳಿಂದ ನಮ್ಮ ಸಂಘಟನೆಯ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಬಾಲಗೋಕುಲದ ತರಗತಿಗಳಿಗೆ ಹಾಗೂ ಇನ್ನಿತರ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲು ಅವಶ್ಯವಿರುವ ಕಟ್ಟಡಕ್ಕೆ ಅದೆಷ್ಟೋ ದಾನಿಗಳು ಧನಸಹಾಯವನ್ನು ನೀಡಿ ನಮ್ಮೊಂದಿಗೆ ಸಹಕರಿಸಿ ನಮ್ಮ ಚಟುವಟಿಕೆಗಳಿಗೆ ಸದಾ ಬೆಂಬಲವಾಗಿ ನಿಂತಿದ್ದಾರೆ. ಅವರೆಲ್ಲರೂ ಸದಾ ಸ್ಮರಣೀಯರು ಎಂದರು.
ಗ್ರಾ.ಪಂ. ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಬಾಲಗೋಕುಲದ ಮೂಲಕ ಅನೇಕ ಮಕ್ಕಳನ್ನು ಸನಾತನ ಭಾರತೀಯ ಸಂಸ್ಕøತಿಯತ್ತ ಸೆಳೆಯುವ ಕಾರ್ಯದಲ್ಲಿ ಈ ಸಂಘಟನೆಯು ಸದಾ ನಿರತವಾಗಿದೆ. ಇಂತಹ ಸಂಘಟನೆಯನ್ನು ಕಟ್ಟುವ ಮೂಲಕ ಇಲ್ಲಿನ ಯುವಕರು ಮಾದರಿಯಾಗಿದ್ದು, ಅನೇಕ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮೂಲಕ ಅವರಿಗೆ ಉತ್ತಮ ಭವಿಷ್ಯವನ್ನು ತಂದುಕೊಡುವಲ್ಲಿಯೂ ಮುತುವರ್ಜಿಯನ್ನು ವಹಿಸುತ್ತದೆ ಎಂದರು.
ಹಿರಿಯರಾದ ಜತ್ತಪ್ಪ ರೈ ಮುನಿಯೂರು ಶುಭಾಶಂಸನೆಗೈದರು. ಸಂಘದ ಸದಸ್ಯ ರತ್ನಾಕರ ಎಸ್. ಓಡಂಗಲ್ಲು ಸ್ವಾಗತಿಸಿ, ಕಾರ್ಯದರ್ಶಿ ಸುರೇಶ್ ಧನ್ಯವಾದವನ್ನಿತ್ತರು. ಸಂಘ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಲಕ್ಕೀಕೂಪನ್‍ನ ಬಂಪರ್ ಬಹುಮಾನವಾದ `ಸ್ಕೂಟರ್' ವಿಜೇತರಾದ ಮುಳ್ಳೇರಿಯದ ಗಣರಾಜ್ ಸುಧೀರ್ ಅವರಿಗೆ ಸಂಘದ ಪದಾಧಿಕಾರಿಗಳು ಹಸ್ತಾಂತರಿಸಿದರು.