ಬದಿಯಡ್ಕ: ಪ್ರಾಚೀನ ಪರಂಪರೆಯಲ್ಲಿ ಶ್ರೆÃಷ್ಠ ಗುರುವಾಗಿದ್ದ ಭಾರತ ರಾಷ್ಟç ಮತ್ತೆ ಆ ಮಟ್ಟಕ್ಕೆÃರುವುದು ರಾಷ್ಟçಪ್ರೆÃಮಿಯ ಹಂಬಲ. ಚುನಾವಣೆ, ಅಧಿಕಾರದ ಲಕ್ಷö್ಯವೆನ್ನುವುದು ಕೇವಲ ಅಧಿಕಾರ ಅಲ್ಲ. ಅದು ಬದಲಾವಣೆ, ಪರಿವರ್ತನೆಯ ಸಾಕಾರತನವೆಂದು ಪ್ರಧಾನ ನರೇಂದ್ರಮೋದಿ ಆಶಯ ವ್ಯಕ್ತಪಡಿಸುತ್ತಾರೆ. ಆ ಮೂಲಕ ರಾಷ್ಟçಕಟ್ಟುವ ಪರಿಕಲ್ಪನೆಯ ಹೊಸ ಮುಖವನ್ನು ಹುಟ್ಟುಹಾಕಿದರು. ಅದು ಎಂದಿಗೂ ಜನ ಸಾಮಾನ್ಯರಲ್ಲಿ ಜಾಗೃತವಾಗಿರಬೇಕು ಎಂದು ಕರ್ನಾಟಕದ ವಿಧಾನ ಪರಿಷತ್ತು ಪ್ರತಿಪಕ್ಷದ ಮಾಜಿ ಸಚೇತಕ ಕ್ಯಾಪ್ಟನ್.ಗಣೇಶ್ ಕಾರ್ಣಿಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಷ್ಟçದ ಸಮಗ್ರ ವಿಕಾಸದಲ್ಲಿ ಯುವಜನರ ಸಂಕಲ್ಪ ಶಕ್ತಿಯಿಂದೊಡಗೂಡಿದ ತೊಡಗಿಸುವಿಕೆ ಮತ್ತು ರಾಷ್ಟç ಚಿಂತನೆಯ ಸಕಾರಾತ್ಮಕ ಶಕ್ತಿ ಸಂಚಯನಕ್ಕಾಗಿ ಶುಕ್ರವಾರದಿಂದ ಸೋಮವಾರದ ವರೆಗೆ(ಡಿ.೩೧ರ) ನೀರ್ಚಾಲು ಸಮೀಪದ ಮಾನ್ಯ ಬಳಿಯ ಮೇಗಿನಡ್ಕದಲ್ಲಿ ನಮೋ, ಜ್ಞಾನ, ಭಕ್ತಿ ಹಾಗೂ ಯಕ್ಷ ಯಜ್ಞಗಳೆಂಬ ನಾಲ್ಕು ಮುಖಗಳ ವಿಶಿಷ್ಟ ಕಾರ್ಯಕ್ರಮದ ಪ್ರಥಮ ದಿನವಾದ ಶುಕ್ರವಾರ ಸಂಜೆ ಆಯೋಜಿಸಲಾದ ನವೋ ಯಜ್ಞವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟçದ ಜನತೆಯ ಉಡುಗಿದ ಶಕ್ತಿಯನ್ನು ಮತ್ತೆ ಬಡಿದೇಳಿಸುವ ನಾಯಕರಾಗಿ ಪ್ರಧಾನಿ ನರೇಂದ್ರಮೋದಿಯವರ ಆಡಳಿತ ದೇಶವನ್ನು ಎತ್ತರಕ್ಕೆÃರಿಸಿ, ಉಜ್ವಲ ಭವಿಷ್ಯವನ್ನು ಮುಂದಿರಿಸಿದೆ. ರಾಷ್ಟçದ ಭದ್ರತೆಯ ದೃಷ್ಟಿಯಿಂದ ಸೈನಿಕರಿಗೆ ಪರಮಾಧಿಕಾರ ನೀಡುವ ಮೂಲಕ ವಿಶಿಷ್ಟ ಬಲ ನೀಡುವ ಸಾಮರ್ಥ್ಯವನ್ನು ಮೋದಿ ನಿರ್ವಹಿಸಿರುವುದರಿಂದ ಕಳೆದ ನಾಲ್ಕು ವರ್ಷಗಳಿಂದ ಗಡಿಯಲ್ಲಿ ದೊಡ್ಡ ಪ್ರಮಾಣದ ಭದ್ರತಾ ವೈಫಲ್ಯಗಳಾಗಿಲ್ಲ. ಉಗ್ರ ದಮನ ಬಹುತೇಕ ಸಾಧ್ಯವಾಗಿದೆ ಎಂದು ಅವರು ತಿಳಿಸಿದರು. ಕೃಷಿಕರು, ಸಾಮಾನ್ಯ ವ್ಯಾಪಾರ-ಉದ್ಯಮಗಳು ಸಮಸ್ಯೆಗಳಿಲ್ಲದೆ ಮುನ್ನಡೆದಿದೆ. ಆದರೆ ಇಂತಹ ಕೇಂದ್ರ ಸರಕಾರದ ಸಕಾರಾತ್ಮಕ ಯತ್ನಗಳನ್ನು ಗ್ರಹಿಸುವ ಮನೋಸ್ಥಿತಿ ಎಲ್ಲರಲ್ಲಿರಬೇಕು ಎಂದು ಅವರು ಕರೆನೀಡಿದರು. ಪ್ರತಿಯೊಬ್ಬ ವ್ಯಕ್ತಿಯ ಮನೋಭಾವಗಳು ಬದಲಾಗಬೇಕು. ದೇಶದ ಆರ್ಥಿಕತೆ, ಸಾಮಾಜಿಕ ಜೀವನ, ಭದ್ರತೆ, ಸಹಿತ ಪ್ರತಿಯೊಂದು ವಿಭಾಗಗದಲ್ಲೂ ಬದಲಾವಣೆ ತರಲು ಸಾಧ್ಯವಾದ ನಮೋ ಚಿಂತನೆ ಇನ್ನಷ್ಟು ಭದ್ರ-ಬಲಗೊಳ್ಳಬೇಕು ಎಂದು ಕಾರ್ಣಿಕ್ ತಿಳಿಸಿದರು.
ಜಿಲ್ಲಾ ಪಂಚಾಯತು ಸದಸ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ನ್ಯಾಯವಾದಿ ಕೆ.ಶ್ರಿÃಕಾಂತ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಬಿಜೆಪಿ ಸದಸ್ಯ ಜಯಂತ ಪಾಟಾಳಿ, ಜಿಲ್ಲಾ ಪಂಚಾಯತು ಮಾಜೀ ಸದಸ್ಯೆ ಶಾರದಾ ಎಸ್.ಎನ್.ಭಟ್ ಉಪಸ್ಥಿತರಿದ್ದು ಮಾತನಾಡಿದರು.
ಕಾರ್ಯಕ್ರಮ ಸಂಯೋಜಕ ಡಾ.ಮನೋಹರ್ ಮೇಗಿನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪುಟಾಣಿ ವಿದ್ಯಾರ್ಥಿ ಕು. ವಿಭಾ ರಾವ್ ನಮೋ ಮತ್ತೆ ಏಕೆ ಮತ್ತು ಯಶಸ್ವಿ ಯೋಜನೆಗಳ ಬಗ್ಗೆ ಮಾತನಾಡಿದಳು. ನಂದನ್ ನಚಿಕೇತ ರಾವ್ ಉಪಸ್ಥಿತರಿದ್ದರು. ಪ್ರೊ.ಎ.ಶ್ರಿÃನಾಥ್ ಕಾರ್ಯಕ್ರಮ ನಿರ್ವಹಿಸಿದರು.
ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಹಿರಿಯ ಚಿಂತಕ, ಸಾಹಿತಿ ಡಾ.ಎಸ್.ಎಲ್.ಬೈರಪ್ಪ .ಪ್ರಧಾನ ಗುರುದತ್ತ್ ಉಪಸ್ಥಿತರಿದ್ದರು.