ನಾಗಪುರ: ಟಿವಿ ವೀಕ್ಷಕರಿಗೆ ಭರ್ಜರಿ ಕೊಡುಗೆ. ಗ್ರಾಹಕರು ತಿಂಗಳಿಗೆ ರೂ. 153 ರೂ. ಪಾವತಿಸಿ 100 ಪೇಯ್ಡ್ ಅಥವಾ ಉಚಿತ ಚಾನೆಲ್ ಗಳನ್ನು ವೀಕ್ಷಿಸಬಹುದಾಗಿದೆ.
ಗ್ರಾಹಕರು ಜಿಎಸ್ ಟಿ ಸೇರಿದಂತೆ ತಿಂಗಳಿಗೆ 153.40 ರೂ. ಪಾವತಿಸಿ ಪೇಯ್ಡ್ ಅಥವಾ ಉಚಿತ ಚಾನೆಲ್ ಗಳನ್ನು ವೀಕ್ಷಿಸಬಹುದಾಗಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಆದೇಶಿಸಿದೆ.
ಫೆಬ್ರವರಿ 1 ರಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದ್ದು, ಜನವರಿ 31 ರೊಳಗೆ ಈ 100 ಚಾನೆಲ್ ಗಳನ್ನು ಗ್ರಾಹಕರು ಆಯ್ಕೆ ಮಾಡಬೇಕಾಗುತ್ತದೆ.
ಟ್ರಾಯ್ ಆದೇಶ ಹೆಚ್ ಡಿ ಚಾನೆಲ್ ಗಳಿಗೆ ಅನ್ವಯವಾಗುವುದಿಲ್ಲ. ಆದಾಗ್ಯೂ, ಹೆಚ್ ಡಿ ಚಾನೆಲ್ ಗಳನ್ನು ಕೂಡಾ ಆಯ್ಕೆ ಮಾಡಬಹುದಾಗಿದೆ ಎಂದು ಕೆಲ ಮಾಧ್ಯಮ ಏಜೆನ್ಸಿಗಳು ವರದಿ ಮಾಡಿವೆ.
ಒಂದು ಎಚ್ ಡಿ ಚಾನೆಲ್ ಎರಡು ಹೆಚ್ ಡಿಯೇತರ ಚಾನೆಲ್ ಗೆ ಸಮನವಾಗಿರಲಿದ್ದು, ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ತಮ್ಮ ಸೇವಾ ಸಂಸ್ಥೆಗಳನ್ನು ಸಂಪರ್ಕಿಸಬಹುದಾಗಿದೆ.