ಷಹಜಹಾನಪುರ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಸತತ 100 ಗಂಟೆಗಳ ಕಾಲ ಭಾಷಣ ಮಾಡಿ ಗಿನ್ನಿಸ್ ವಲ್ರ್ಡ್ ರೆಕಾರ್ಡ್ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾರೆ.
ಉತ್ತರ ಪ್ರದೇಶ ಲಖ್ಮಿಪುರ ನಿವಾಸಿಯಾಗಿರುವ ಯತೀಶ್ ಚಂದ್ರ ಶುಕ್ಲಾ ಎಂಬ 35 ವರ್ಷದ ವ್ಯಕ್ತಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇವರು ಜನವರಿ 5ರಿಂದ 9ರವರೆಗೆ ಸತತ 4 ದಿನ (ನೂರು ಗಂಟೆ) ಭಾಷಣ ಮಾಡಿದ್ದಾರೆ.
ಮಾಜಿ ಅತಿಥಿ ಉಪನ್ಯಾಸಕರಾಗಿದ್ದ ಶುಕ್ಲಾ ಅವರು ನೇಪಾಳದ ಅನಂತ್ ರಾಮ್ ಅವರ ದಾಖಲೆಯನ್ನು ಅಳಿಸಿ ಹಾಕಿ ನೂತನ ದಾಖಲೆ ನಿರ್ಮಿಸಿದ್ದಾರೆ.ಅನಂತ್ ರಾಮ್ 90 ಗಂಟೆಗಳ ಕಾಲ ಭಾಷಣ ಮಾಡುವ ಮೂಲಕ ವಿಶ್ವ ದಾಖಲೆ ಪುಸ್ತಕ ಸೇರಿದ್ದರು.
ಶುಕ್ಲಾ ತಮ್ಮ ಭಾಷಣದ ನಡುವೆ ಕೇವಲ 32 ಬಾರಿ ವಿರಾಮ ತೆಗೆದುಕೊಂಡಿದ್ದರೆನ್ನುವುದು ಗಮನಾರ್ಹ.
ಗೋಲ್ಡನ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್ ಅಧಿಕಾರಿಗಳಾದ ಎಸ್‍ಡಿಎಂ, ಸದರ್, ಡಾ.ಅರುಣ್ ಕುಮಾರ್ ಸಿಂಗ್ ಮತ್ತಿತರರ ಉಪಸ್ಥಿತಿಯಲ್ಲಿ ಶುಕ್ಲಾ ಈ ಸಾಧನೆ ಮಾಡಿದ್ದು ಅವರಿಗೆ ವಿಶ್ವ ದಾಖಲೆಯ ಪ್ರಶಸ್ತಿ ಪತ್ರವನ್ನು ಹಸ್ತಾಂತರಿಸಲಾಯಿತು.
ಈ ಮಧ್ಯೆ ಇವರ ಈ ಸಾಧನೆ ರಾಜಕೀಯ ಮುಖಂಡರ ಕಣ್ಣಿಗೆ ಕಾಣದಿರಲಿ ಎಂಬ ಮಾತುಗಳು ಕೇಳಿಬಂದಿದೆ.