ನವದೆಹಲಿ: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ "ಆಯುಷ್ಮಾನ್ ಭಾರತ್" ಆರೋಗ್ಯ ಸೇವೆ ಯೋಜನೆಯ 100 ದಿನಗಳ ಯಶಸ್ಸಿಗಾಗಿ ಭಾರತ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
"ಆಯುಶ್ಮಾನ್ ಭಾರತ್" ಯೋಜನೆಯ ಮೊದಲ ನೂರು ದಿನಗಳ ಯಶಸ್ಸಿಗಾಗಿ ಭರತ ಸರ್ಕಾರಕ್ಕೆ ಅಭಿನಂದನೆಗಳು.ಮುಂದಿನ ದಿನಗಳಲ್ಲಿ ಈ ಯೋಜನೆ ಎಷ್ಟು ಸಂಖ್ಯೆಯ ಭಾರತೀಯರನ್ನು ತಲುಪಲಿದೆ ಎನ್ನುವುದನ್ನು ಕಾಣಲು ನಾನು ಉತ್ಸುಕನಾಗಿದ್ದೇನೆ" ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ದಾರೆ.
ಆಯುಶ್ಹ್ಮಾನ್ ಭಾರತ್ ಮೊದಲ ನೂರು ದಿನಗಳಲ್ಲಿ 685000 ಫಲಾನುಭವಿಗಳನ್ನು ತಲುಪಿದೆ.ಯೋಜನೆ ಮೂಲಕ ಉಚಿತ ಆರೋಗ್ಯ ಸೇವೆ ಪಡೆಯುವವರ ಸಂಖ್ಯೆ ಶೀಘ್ರವಾಗಿ ವರ್ಧಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ ಬಳಿಕ ಗೇಟ್ಸ್ ಈ ಅಭಿನಂದನೆ ಹೇಳಿದ್ದಾರೆ.
ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಓ)ಮಹಾನಿರ್ದೆಶಕರಾದ ಟಿಎಘೆಬ್ರಾಸಿಯಸ್ ಜನವರಿ 3ರಂದು ಏಳು ಲಕ್ಷ ಜನರು ತಮ್ಮ ಆರೋಗ್ಯ ಸೇವೆ ಪಡೆಯಲು ನೆರವಾದ ಆಯುಷ್ಮಾನ್ ಭಾರತ್ ಯೋಜನೆ ಕುರಿತು ಪ್ರಧಾನಿ ಮತ್ತು ಆರೋಗ್ಯ ಸಚಿವರನ್ನು ಪ್ರಶಂಸಿಸಿದ್ದರು.
"ತನ್ನ ಮೊದಲ 100 ದಿನಗಳಲ್ಲಿ ಭಾರತದ ಆಯುಷ್ಮಾನ್ ಭಾರತ್ ಯೋಜನೆ ಸುಮಾರು 700,000 ಜನರಿಗೆ ಉಚಿತ ಆರೈಕೆ ಒದಗಿಸಿದೆ ನಾನು ಭಾರತ ಸರ್ಕಾರದ ಈ ದಾರ್ಶನಿಕ ನಾಯಕತ್ವಕ್ಕೆ, ಪ್ರಧಾನಿ ಮೋದಿ ಹಾಗೂ ಆರೋಗ್ಯ ಸಚಿವ ನಡ್ಡಾ ಅವರನ್ನು ಅಭಿನಂದಿಸುತ್ತೇನೆ" ಅವರು ಟ್ವೀಟ್ ಮಾಡಿದ್ದರು.
ಜನವರಿ 1ರಂದು ಮಾತನಾಡಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾರತ ಸರ್ಕಾರದ ಆರೋಗ್ಯ ಕಾಳಜಿ ಯೋಜನೆ "ಆಯುಷ್ಮಾನ್ ಭಾರತ್" ಒಂದು ಗೇಮ್ ಚೇಂಜರ್ ಎಂದು ಬಿಂಬಿಸಿದ್ದರು.ಯೋಜನೆ ಪ್ರಾರಂಭಗೊಂಡ ದಿನದಿಂದ ಪ್ರತಿದಿನ ಸರಾಸರಿ 5,000 ಮಂದಿ ಇದರ ಸೌಲಭ್ಯ ಹೊಂದುತ್ತಿದ್ದಾರೆ.
ಸೆಪ್ಟೆಂಬರ್ 23, 2018ರಂದು ಜಾಖರ್ಂಡ್ ರಾಜಧಾನಿ ರಾಂಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಆರೋಗ್ಯ ಕಾಳಜಿ ಯೋಜನೆ "ಆಯುಷ್ಮಾನ್ ಭಾರತ್" ಯೋಜನೆಗೆ ಚಾಲನೆ ನೀಡಿದ್ದರು.ಈ ಯೋಜನೆಯಂತೆ ದೇಶದಾದ್ಯಂತ ಇರುವ 10.74 ಕೋಟಿ ಗೆ ಹೆಚ್ಚಿನ ಬಡ ಕುಟುಂಬಕ್ಕೆ ವಾರ್ಷಿಕ 5 ರು. ಆರೋಗ್ಯ ಕಾತರಿ ನೀಡಲಿದೆ.