ನವದೆಹಲಿ: 2019 ರ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಹೊಸ ಮೀಸಲಾತಿ ಘೋಷಣೆ ದೇಶಾದ್ಯಂತ ಸಂಚಲನ ಮೂಡಿಸುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮೇಲ್ವರ್ಗದ ಜನತೆ ಮೋದಿ ಸರ್ಕಾರದ ನಿರ್ಣಯವನ್ನು ಸ್ವಾಗತಿಸುತ್ತಿದ್ದರೆ, ವಿಪಕ್ಷ ಕಾಂಗ್ರೆಸ್ ಇದನ್ನು ಚುನಾವಣಾ ಗಿಮಿಕ್ ಎಂದು ವಿಶ್ಲೇಷಿಸಿದೆ.
ಸುಪ್ರೀಂ ಕೋರ್ಟ್ ನ ತೀರ್ಪಿನ ಪ್ರಕಾರ ಮೀಸಲಾತಿ ಪ್ರಮಾಣ ಒಟ್ಟಾರೆ ಶೇ.50 ರಷ್ಟನ್ನು ಮೀರುವಂತಿಲ್ಲ. ಆದರೆ ಕೇಂದ್ರ ಸರ್ಕಾರ ಈಗ ಕೈಗೊಂಡಿರುವ
ಮೇಲ್ವರ್ಗದ ಬಡವರಿಗೆ ಶೇ.10 ರಷ್ಟು ಮೀಸಲಾತಿ ನಿರ್ಧಾರದಿಂದ ಮೀಸಲಾತಿ ಪ್ರಮಾಣ ಒಟ್ಟಾರೆ ಶೇ.60 ಕ್ಕೆ ಏರಿಕೆಯಾಗಲಿದೆ, ಹೊಸ ಮೀಸಲಾತಿ ನಿಯಮ ಜಾರಿಗೆ ಬರಬೇಕಾದಲ್ಲಿ ಈ ಹಿನ್ನೆಲೆಯಲ್ಲಿ ಸರ್ಕಾರ ಕಾನೂನು ತಿದ್ದುಪಡಿ ತರುವುದು ಅತ್ಯಗತ್ಯವಾಗಿದ್ದು ಜ.08 ರಂದೇ ಸಂಸತ್ ನಲ್ಲಿ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ಇಷ್ಟೇಲ್ಲಾ ಕುತೂಹಲ ಮೂಡಿಸಿರುವ ಮೇಲ್ಜಾತಿಯ ಬಡವರ ಮೀಸಲಾತಿಗೆ ಅರ್ಹತಾ ಮಾನದಂಡಗಳು ಹೀಗಿವೆ:
ಶಿಕ್ಷಣ, ಸರ್ಕಾರಿ ಉದ್ಯೋಗ ಪಡೆಯುವುದಕ್ಕೆ ಮೇಲ್ಜಾತಿಯ ಬಡವರ ಮೀಸಲಾತಿಯ ವ್ಯಾಪ್ತಿಯಲ್ಲಿ ಬರಬೇಕಾದರೆ ಆರ್ಥಿಕವಾಗಿ ಹಿಂದುಳಿದವರಾಗಿರಬೇಕು ಅಂದರೆ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಮ್ಮಿ ಇರಬೇಕು.
1,000 ಚದರ ಅಡಿಗಿಂತಲೂ ಕಡಿಮೆ ಇರುವ ಮನೆ (ರೆಶಿಡೆನ್ಷಿಯಲ್ ಪ್ರಾಪರ್ಟಿ) ಇದ್ದ ಮೇಲ್ವರ್ಗದವರೂ ಸಹ ಮೀಸಲಾತಿಗೆ ಅರ್ಹರು
5 ಹೆಕ್ಟೇರ್ ಗಿಂತಲೂ ಕಡಿಮೆ ಕೃಷಿ ಭೂಮಿ ಹೊಂದಿರುವ ಮೇಲ್ಜಾತಿಯವರೂ ಮೀಸಲಾತಿಗೆ ಅರ್ಹರು
ನಿಗದಿತ ಪುರಸಭೆ ವ್ಯಾಪ್ತಿಯಲ್ಲಿ109 ಯಾರ್ಡ್ ಗಳಿಗಿಂತ ಕಡಿಮೆ ವಸತಿ ಸ್ಥಳ ಹಾಗೂ ನಿಗದಿಯಾಗದ ಪುರಸಭೆ ವ್ಯಾಪ್ತಿಯಲ್ಲಿ 209 ಯಾರ್ಡ್ ಗಿಂತ ಕಡಿಮೆ ವಸತಿ ಸ್ಥಳ ಹೊಂದಿರುವವರೂ ಮೀಸಲಾತಿಗೆ ಅರ್ಹರಾಗಿದ್ದಾರೆ.
ಶೇ. 10 ರಷ್ಟು ಮೀಸಲಾತಿಗೆ ಅರ್ಹವಾದ ವರ್ಗಗಳು ಇಂತಿವೆ:
ಠಾಕೂರ್
ಬ್ರಾಹ್ಮಣ
ರಜಪೂತ್
ಬನಿಯಾ
ಜಾಟ್
ಪಟೇಲ್