ಮುಳ್ಳೇರಿಯ: ಕುಂಟಾರು ಸಮೀಪದ ಮಾಯಿಲಂಕೋಟೆ ಚೊರ್‍ಕ್ಕಡ ತರವಾಡು ಶ್ರೀ ಕರಿಚಾಮುಂಡಿ, ರಕ್ತೇಶ್ವರೀ ದೈವಸ್ಥಾನ ದೈವಂಕಟ್ಟು ಮಹೋತ್ಸವ ಬ್ರಹ್ಮಶ್ರೀ ರವೀಶ ತಂತ್ರಿ ಮತ್ತು ಬ್ರಹ್ಮಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಜ.12 ಮತ್ತು 13ರಂದು ನಡೆಯಲಿದೆ.
ಜ.12ರಂದು ಬೆಳಿಗ್ಗೆ 7ಕ್ಕೆ ಗಣಪತಿ ಹೋಮ, ರಾತ್ರಿ 7ಕ್ಕೆ ಕಾನ್ನೋರ್ ದೈವದ ಕೋಲ, 9ಕ್ಕೆ ಕೊರತ್ತಿ ಅಮ್ಮನ ಕೋಲ, 10ಕ್ಕೆ ಕೋರಚ್ಚನ್ ದೈವದ ಕೋಲ, 12ಕ್ಕೆ ಕುಟುಂಬ ಪಂಜುರ್ಲಿ, ಕಲ್ಲುರ್ಟಿ ದೈವಗಳ ಕೋಲ, ರಾಜ ಮಾಯಿಲಂಕೋಟೆ ಅವರ ಹರಿಕೆ ಕೋಲ ನಡೆಯಲಿದೆ.
ಜ.13ರಂದು ಬೆಳಿಗ್ಗೆ 7ಕ್ಕೆ ಕುಟುಂಬ ದೈವದ ಕೋಲ, 10ಕ್ಕೆ ರಕ್ತೇಶ್ವರೀ ದೈವದ ಕೋಲ, 11.30ಕ್ಕೆ ಕರಿಚಾಮುಂಡಿ ದೈವದ ಕೋಲ, ಮಧ್ಯಾಹ್ನ 2.30ಕ್ಕೆ ವಿಷ್ಣು ಮೂರ್ತಿ ದೈವದ ಕೋಲ, ಸಂಜೆ 4ಕ್ಕೆ ಸೀತಾರಾಮ ಭಟ್ ಮಾಯಿಲಂಕೋಟೆ ಅವರ ಮನೆಗೆ ವಿಷ್ಣುಮೂರ್ತಿ ದೈವದ ಭೇಟಿ, ಸಂಜೆ 5ಕ್ಕೆ ಗುಳಿಗನ ಕೋಲ ನಡೆಯಲಿದೆ.