HEALTH TIPS

ಜಿಲ್ಲಾ 12ನೇ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ


         ಬದಿಯಡ್ಕ: ಸಾಹಿತ್ಯ ಸಮ್ಮೇಳನಗಳು ಭಾಷೆ-ಸಾಹಿತ್ಯ ಬೆಳವಣಿಗಳಿಗೆ ಪೂರಕವಾದ ಕಾರ್ಯಚಟುವಟಿಕೆಗಳನ್ನು ಮಾತ್ರ ಪ್ರತಿಬಿಂಬಿಸಬೇಕು. ಹೊರತಾಗಿ ನಿಂದನಾ ಸಮ್ಮೇ¼ಗಡಿನಾಡು ಕಾಸರಗೋಡಿನ ಸಾಹಿತ್ಯ ಸಾಂಸ್ಕøತಿಕÀನ ಆಗಬಾರದು ಎಂದು ಮಧುರೈ ಕಾಮರಾಜ ವಿವಿಯ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಹರಿಕೃಷ್ಣ ಭರಣ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
       ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲಲಿ ಜ.19 ಹಾಗೂ 20 ರಂದು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡ 12ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಅಪರಾಹ್ನ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
      ಕನ್ನಡ ಭಾಷೆ, ನುಡಿ ಸಂಸ್ಕøತಿಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವಲ್ಲಿ ಕಸಾಪ ನೇತೃತ್ವದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಗಳಿಂದ ವಿಪುಲ ಅವಕಾಶಗಳು ಸೃಷ್ಟಿಯಾಗುತ್ತದೆ. ಗಡಿನಾಡು ಕಾಸರಗೋಡಿನ ಭಾಷೆ-ಸಾಂಸ್ಕøತಿಕ ಭೂಪಟದಲ್ಲಿ ನೀರ್ಚಾಲು ಪ್ರಧಾನ ಭೂಮಿಕೆಯಾಗಿ ಶತಮಾನದಿಂದ ಗುರುತಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪುಣ್ಯದ ನೆಲೆಯಾದ ನೀರ್ಚಾಲಿನಲ್ಲಿ ಸಮ್ಮೇಳನ ಯಶಸ್ವಿಯಾಗುವುದೆಂದು ಅವರು ತಿಳಿಸಿದರು.
       ಕಸಾಪ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿ ಸಮ್ಮೇಳನದ ಯಶಸ್ಸಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಕಾಸರಗೋಡಿನ ಕನ್ನಡ ಶಿಕ್ಷಣ ವ್ಯವಸ್ಥೆಯ ಮೇಲೆ ಸವಾರಿಗೈಯ್ಯುತ್ತಿರುವ ಆಳುವ-ಅಧಿಕಾರಿ ವರ್ಗದವರಿಗೆ ಇಲ್ಲಿಯ ಕನ್ನಡ ಶಕ್ತಿಯ ಪ್ರದರ್ಶನವಾಗಿ ಸಮ್ಮೇಳನ ಮೂಡಿಬರಲಿದೆ ಎಂದು ತಿಳಿಸಿದರು.
        ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಉಪಸ್ಥಿತರಿದ್ದು ಮಾತನಾಡಿ, ಆಯೋಜನೆಗೊಂಡಿರುವ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗುವುದರೊಂದಿಗೆ ಮಲಗಿರುವ ಕನ್ನಡ ಮನಸ್ಸುಗಳನ್ನು ಬಡಿದೆಬ್ಬಿಸಲಿ ಎಂದು ಹಾರೈಸಿದರು.
       ಕವಯಿತ್ರಿ ವಿಜಯಾ ಸುಬ್ರಹ್ಮಣ್ಯ ಕುಂಬಳೆ, ಶಿಕ್ಷಕಿ ವಾಣೀ ಪಿ.ಎಸ್., ನಿವೃತ್ತ ಶಿಕ್ಷಕ ಬಾಲ ಮಧುರಕಾನನ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ, ವೀರೇಶ್ವರ ಕರ್ಮರ್ಕರ್, ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಗೋವಿಂದ ಭಟ್ ಬಳ್ಳಮೂಲೆ, ಉದನೇಶವೀರ, ನರಹರಿ ಮಾಸ್ತರ್ ಕಳತ್ತೂರು, ಶಿವರಾಮ ಭಟ್ ಕಾರಿಂಜ, ನಿವೃತ್ತ ಮುಖ್ಯೋಪಾಧ್ಯಾಯ ಪಿ.ಶಂಕರ ಭಟ್, ಚಂದ್ರಶೇಖರ ರೈ ಸೀತಾಂಗೋಳಿ ಮೊದಲಾದವರು ಉಪಸ್ಥಿತರಿದ್ದರು.ಕಸಾಪ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಭಟ್ ಧರ್ಮತ್ತಡ್ಕ ಸ್ವಾಗತಿಸಿ, ಗೌರವ ಕಾರ್ಯದರ್ಶಿ ನವೀನಚಂದ್ರ ಮಾಸ್ತರ್ ಮಾನ್ಯ ವಂದಿಸಿದರು.
      

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries