ಬದಿಯಡ್ಕ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜ.19 ಹಾಗೂ 20 ರಂದು ನೀರ್ಚಾಲು ಮಹಾಜನ ವಿದ್ಯಾಸಮಸ್ಥೆಯ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಜ.19 ರಂದು ಬೆಳಿಗ್ಗೆ 8.30ಕ್ಕೆ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ರಾಷ್ಟ್ರ ಧ್ವಜಾರೋಹಣಗೈಯ್ಯುವರು. ಕಸಾಪ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಗೈಯ್ಯುವರು, ಎಸ್.ನಾರಾಯಣ ಭಟ್ ಕನ್ನಡ ಧ್ವಜಾರೋಹಣಗೈಯ್ಯುವರು. ಬಳಿಕ 9.30ಕ್ಕೆ ನೀರ್ಚಾಲು ವಿಷ್ಣುಮೂರ್ತಿ ನಗರದಿಂದ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಪಿ.ಶ್ರೀಕೃಷ್ಣ ಭಟ್ ಅವರನ್ನು ವೈಭವೋಪೇತ ಮೆರವಣಿಗೆಯೊಂದಿಗೆ ಸಮ್ಮೇಳನ ನಗರಿಗೆ ಸ್ವಾಗತಿಸಲಾಗುವುದು.ಬಹದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಬಟ್ ಮೆರವಣಿಗೆ ಉದ್ಘಾಟಿಸುವರು.
ಬೆಳಿಗ್ಗೆ 10.30ರಿಂದ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನು ಬಳಿಗಾರ್ ಉದ್ಘಾಟಿಸುವರು.ಸಮ್ಮೇಳನದ ಅಧ್ಯಕ್ಷ ಡಾ.ಪಿ.ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸುವರು. ಶಾಸಕ ಎನ್ ಎ ನೆಲ್ಲಿಕುನ್ನು ಪುಸ್ತಕ ಮಳಿಗೆ, ಜಿ.ಪಂ.ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. ಬ್ಲಾ.ಪಂ. ಸದಸ್ಯ ಅವಿನಾಶ ರೈ, ಗ್ರಾ.ಪಂ.ಸದಸ್ಯ ಶಂಕರ ಡಿ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೆ.ಕೈಲಾಸಮೂರ್ತಿ, ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ರವೀಂದ್ರನಾಥ ಬಲ್ಲಾಳ್ ಕೆ.ಆರ್. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ, ಸಮ್ಮೇಳನದ ಕಾರ್ಯಾಧ್ಯಕ್ಷ ಜಯದೇವ ಖಂಡಿಗೆ, ಸಂಘಟನಾ ಸಮಿತಿ ಉಪಾಧ್ಯಕ್ಷ ವೆಂಕಟರಾಜ ಸಿ.ಎಚ್,ಶಿವಪ್ರಕಾಶ್ ಎಂ.ಕೆ, ಮೀನಾಕ್ಷಿ ಎಚ್.ಎನ್, ವಿಶಾಲಾಕ್ಷಿ ಬಿ.ಕೆ ಮೊದಲಾದವರು ಉಪಸ್ಥಿತರಿರುವರು.
ಸಮ್ಮೇಳನದ ಅಧ್ಯಕ್ಷ ಡಾ.ಪಿ.ಶ್ರೀಕೃಷ್ಣ ಭಟ್ ಅವರ ಅವಲೋಕನ-ಸಾಹಿತ್ಯ ಶಾಸ್ತ್ರ ಸಮೀಕ್ಷೆ, ಹಿರಿಯ ಸಾಹಿತಿ ಡಾ.ಹರಿಕೃಷ್ಣ ಭರಣ್ಯ ಸಂಗ್ರಹಿಸಿರುವ ಹವಿಗನ್ನಡದ ಸವಿ ನಾಟಕಗಳು, ಪ್ರೊ.ವಿ.ಬಿ.ಅರ್ತಿಕಜೆ ಹಾಗೂ ಡಾ.ಹರಿಕೃಷ್ಣ ಭರಣ್ಯ ಸಂಪಾದಿಸಿರುವ ಹವ್ಯಕ ಹಾಡುಗಳ ಸಂಗ್ರಹ ತುಪ್ಪಶನ ಉಂಬಲೆ ಮತ್ತು ನಿವೃತ್ತ ಶಿಕ್ಷಕ ಎಂ.ತಿಮ್ಮಣ್ಣ ಭಟ್ ಧರ್ಮತ್ತಡ್ಕ ಬರೆದಿರುವ ಶ್ರೀಕೃಷ್ಣ ಪರಂಧಾಮ ಯಕ್ಷಗಾನ ಪ್ರಸಂಗ ಕೃತಿ ಹಾಗೂ ಕಾಟುಕುಕ್ಕೆ ಶಾಲಾ ವಿದ್ಯಾರ್ಥಿನಿ ಪ್ರಿಯ ಎಸ್ ಬರೆದಿರುವ ಪ್ರತಿಬಿಂಬ ಕವನ ಸಂಕಲನಗಳ ಬಿಡುಗಡೆ ಈ ಸಂದರ್ಭ ನಡೆಯಲಿದೆ. ಕಸಾಪ ಗಡಿನಾಡ ಘಟಕಾಧ್ಯಕ್ಷ ಎಸ್ ವಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡುವರು.
ಅಪರಾಹ್ನ 1.30ಕ್ಕೆ ನೀರ್ಚಾಲು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. 2 ರಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ರಾಜಾ ಸ್ವದಾಸ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಬಳಿಕ ಸಂಜೆ 5 ರಿಂದ ಕೇರಳ ರಾಜ್ಯ ಶಾಲಾ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಧರ್ಮತ್ತಡ್ಕ ಶಾಲಾ ವಿದ್ಯಾರ್ಥಿಗಳ ಕೊಂಬುಮೀಸೆ ಕನ್ನಡ ನಾಟಕ ಪಗ್ರದರ್ಶನ ನಡೆಯಲಿದೆ. ಸಂಜೆ 5.45 ರಿಂದ ನೃತ್ಯ ವೈವಿಧ್ಯ ನಡೆಲಿದೆ.
ಜ.20 ರಮದು ಬೆಳಿಗ್ಗೆ 9.30ಕ್ಕೆ ಮಕ್ಕಳ ಕವಿಗೋಷ್ಠಿ ಸನ್ನಿಧಿ ಟಿ.ರೈ ಪೆರ್ಲ ಅಧ್ಯಕ್ಷತೆಯಲ್ಲಿ ನಡೆಯಲಿದೆ. 10.15 ರಿಂದ ವೆಳ್ಳಿಕ್ಕೋತ್ ವಿಷ್ಣು ಭಟ್, ಯು.ಜಿ.ನಾರಾಯಣ ಶರ್ಮಾ ಹಾಗೂ ಬಾಲಸುಬ್ರಹ್ಮಣ್ಯ ಕೋಳಿಕ್ಕಜೆ ಅವರಿಂದ ಸಂಗಿತ ಸಂಭ್ರಮ ಪ್ರಸ್ತುತಗೊಳ್ಲಲಿದೆ. 11.45ರಿಂದ ಟಿ.ಎನ್.ಎ ಖಂಡಿಗೆ ಅವರ ಅಧ್ಯಕ್ಷತೆಯಲ್ಲಿ ಹಿರಿಯರ ಕವಿಗೋಷ್ಠಿ ನಡೆಯಲಿದೆ. 12.45ರಿಂದ ಡಾ.ಶಶಿರಾಜ ನೀಲಂಗಳ ಹಾಗೂ ಜಯಶ್ರೀ ಕಾರಂತರ ನೇತೃತ್ವದಲ್ಲಿ ಗಮಕ ಸ್ವರಭ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1.45ಕ್ಕೆ ರಮ್ಯಶ್ರೀ ಬಳಗದವರಿಂದ ಭಾವ ಸಂಗಮ ಗಾಯನ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 2ರಿಂದ ಹಿರಿಯ ನ್ಯಾಯವಾದಿ ಥೋಮಸ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಕಾಸರಗೋಡಿನ ಕನ್ನಡಿಗರು ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ. ಜ್ವಲಂತ ಸಮಸ್ಯೆಗಳ ಬಗ್ಗೆ ಹರ್ಷಾದ್ ವರ್ಕಾಡಿ ಪ್ರಬಂಧ ಮಂಡಿಸುವರು. , ಭಾಷಾ ಅಲ್ಪಸಂಖ್ಯಾತರಾದ ಕಾಸರಗೋಡು ಬಗ್ಗೆ ಲಕ್ಷ್ಮೀ ಕೆ., ಕನ್ನಡ ಭಾಷೆ ಮತ್ತು ಸಂಸ್ಕøತಿಯ ಉಳಿವಿಗಾಗಿ ಮಾಡಬೇಕಾದ ಕರ್ತವ್ಯಗಳು ವಿಷಯದ ಬಗ್ಗೆ ಮಹಾಲಿಂಗೇಶ್ವರ ಭಟ್ ಎಂ.ವಿ ಪ್ರಬಂಧ ಮಂಡಿಸುವರು. ಅಪರಾಹ್ನ 3.15ಕ್ಕೆ ಎಂಎಸ್ ನರಸಿಂಹಮೂರ್ತಿ ಅವರಿಂದ ಹಾಸ್ಯ ಚಟಾಕಿ ಕಾರ್ಯಕ್ರಮ ನಡೆಯಲಿದೆ.
ಸಂಜೆ 4.ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಮ್ಮೇಳನದ ಅಧ್ಯಕ್ಷರ ಘನ ಅಧ್ಯಕ್ಷತೆಯಲ್ಲಿ ಉದುಮ ಶಾಸಕ ಕೆ.ಕುಂಞÂರಾಮನ್, ಜಿ.ಪಂ ಅಧ್ಯಕ್ಷ ಎಜಿಸಿ ಬಶೀರ್, ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ಎನ್ ಮುಖ್ಯ ಅತಿಥಿಗಳಾಗಿರುವರು. ವಿದ್ವಾಂಸ ದೊಡ್ಡರಮಗೇಗೌಡ ಸಮಾರೋಪ ಭಾಷಣ ಮಾಡುವರು. ವಿವಿಧ ವಲಯಗಳ ಗಣ್ಯರು ಉಪಸ್ಥಿತರಿರುವರು. ಹಿರಿಯ ಸಾಧಕರಾದ ಎಂ.ಶಂಕರ ನಂಬಿಯಾರ್, ಐ.ವಿ.ಭಟ್, ಕೃಷ್ಣ ಬಟ್ ಖಂಡಿಗೆ, ಶೇಡಿಗುಮ್ಮೆ ವಾಸುದೇವ ಭಟ್, ಪ್ರೇಮಾ ಭಟ್ ತೊಟ್ಟೆತ್ತೋಡಿ, ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರನ್ನು ಸಮ್ಮೇಳನದ ವಿಶೇಷ ಪ್ರಸಸ್ತಿ ನೀಡಿ ಗೌರವಿಸಲಾಗುವುದು.
ಸಂಜೆ 6 ರಿಂದ ಅಗಲ್ಪಾಡಿ ಶಾಲಾ ವಿದ್ಯಾರ್ಥಿಗಳಿಂದ ಮುರಾಸುರ ವಧೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.