HEALTH TIPS

ನಾಳೆಯಿಂದ ಎರಡು ದಿನಗಳ ಗಡಿನಾಡ ಜಿಲ್ಲಾ 12ನೇ ಸಾಹಿತ್ಯ ಸಮ್ಮೇಳನ


        ಬದಿಯಡ್ಕ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಹಾಗೂ ನಾಳೆ ಸಾಂಸ್ಕøತಿಕ ನಗರಿ- ವಿದ್ಯಾಕಾಶಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಲಿದೆ.
        ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8.30ಕ್ಕೆ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ರಾಷ್ಟ್ರ ಧ್ವಜಾರೋಹಣಗೈಯ್ಯುವರು. ಕಸಾಪ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಗೈಯ್ಯುವರು, ಎಸ್.ನಾರಾಯಣ ಭಟ್ ಕನ್ನಡ ಧ್ವಜಾರೋಹಣಗೈಯ್ಯುವರು. ಬಳಿಕ 9.30ಕ್ಕೆ ನೀರ್ಚಾಲು ವಿಷ್ಣುಮೂರ್ತಿ ನಗರದಿಂದ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಪಿ.ಶ್ರೀಕೃಷ್ಣ ಭಟ್ ಅವರನ್ನು ವೈಭವೋಪೇತ ಮೆರವಣಿಗೆಯೊಂದಿಗೆ ಸಮ್ಮೇಳನ ನಗರಿಗೆ ಸ್ವಾಗತಿಸಲಾಗುವುದು.ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಬಟ್ ಮೆರವಣಿಗೆ ಉದ್ಘಾಟಿಸುವರು.
       ಬೆಳಿಗ್ಗೆ 10.30ರಿಂದ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನು ಬಳಿಗಾರ್ ಉದ್ಘಾಟಿಸುವರು.ಸಮ್ಮೇಳನದ ಅಧ್ಯಕ್ಷ ಡಾ.ಪಿ.ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸುವರು. ಶಾಸಕ ಎನ್ ಎ ನೆಲ್ಲಿಕುನ್ನು ಪುಸ್ತಕ ಮಳಿಗೆ, ಜಿ.ಪಂ.ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. ಬ್ಲಾ.ಪಂ. ಸದಸ್ಯ ಅವಿನಾಶ ರೈ, ಗ್ರಾ.ಪಂ.ಸದಸ್ಯ ಶಂಕರ ಡಿ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೆ.ಕೈಲಾಸಮೂರ್ತಿ, ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ರವೀಂದ್ರನಾಥ ಬಲ್ಲಾಳ್ ಕೆ.ಆರ್. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
       ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ, ಸಮ್ಮೇಳನದ ಕಾರ್ಯಾಧ್ಯಕ್ಷ  ಜಯದೇವ ಖಂಡಿಗೆ, ಸಂಘಟನಾ ಸಮಿತಿ ಉಪಾಧ್ಯಕ್ಷ ವೆಂಕಟರಾಜ ಸಿ.ಎಚ್,ಶಿವಪ್ರಕಾಶ್ ಎಂ.ಕೆ, ಮೀನಾಕ್ಷಿ ಎಚ್.ಎನ್, ವಿಶಾಲಾಕ್ಷಿ ಬಿ.ಕೆ ಮೊದಲಾದವರು ಉಪಸ್ಥಿತರಿರುವರು.
   ಸಮ್ಮೇಳನದ ಅಧ್ಯಕ್ಷ ಡಾ.ಪಿ.ಶ್ರೀಕೃಷ್ಣ ಭಟ್ ಅವರ ಅವಲೋಕನ-ಸಾಹಿತ್ಯ ಶಾಸ್ತ್ರ ಸಮೀಕ್ಷೆ, ಹಿರಿಯ ಸಾಹಿತಿ ಡಾ.ಹರಿಕೃಷ್ಣ ಭರಣ್ಯ ಸಂಗ್ರಹಿಸಿರುವ ಹವಿಗನ್ನಡದ ಸವಿ ನಾಟಕಗಳು, ಪ್ರೊ.ವಿ.ಬಿ.ಅರ್ತಿಕಜೆ ಹಾಗೂ ಡಾ.ಹರಿಕೃಷ್ಣ ಭರಣ್ಯ ಸಂಪಾದಿಸಿರುವ ಹವ್ಯಕ ಹಾಡುಗಳ ಸಂಗ್ರಹ ತುಪ್ಪಶನ ಉಂಬಲೆ ಮತ್ತು ನಿವೃತ್ತ ಶಿಕ್ಷಕ ಎಂ.ತಿಮ್ಮಣ್ಣ ಭಟ್ ಧರ್ಮತ್ತಡ್ಕ ಬರೆದಿರುವ ಶ್ರೀಕೃಷ್ಣ ಪರಂಧಾಮ ಯಕ್ಷಗಾನ ಪ್ರಸಂಗ ಕೃತಿ ಹಾಗೂ ಕಾಟುಕುಕ್ಕೆ ಶಾಲಾ ವಿದ್ಯಾರ್ಥಿನಿ ಪ್ರಿಯ ಎಸ್ ಬರೆದಿರುವ ಪ್ರತಿಬಿಂಬ ಕವನ ಸಂಕಲನಗಳ ಬಿಡುಗಡೆ ಈ ಸಂದರ್ಭ ನಡೆಯಲಿದೆ. ಕಸಾಪ ಗಡಿನಾಡ ಘಟಕಾಧ್ಯಕ್ಷ ಎಸ್ ವಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡುವರು.
  ಅಪರಾಹ್ನ 1.30ಕ್ಕೆ ನೀರ್ಚಾಲು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. 2 ರಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ರಾಜಾ ಸ್ವದಾಸ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಬಳಿಕ ಸಂಜೆ 5 ರಿಂದ ಕೇರಳ ರಾಜ್ಯ ಶಾಲಾ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಧರ್ಮತ್ತಡ್ಕ ಶಾಲಾ ವಿದ್ಯಾರ್ಥಿಗಳ ಕೊಂಬುಮೀಸೆ ಕನ್ನಡ ನಾಟಕ ಪಗ್ರದರ್ಶನ ನಡೆಯಲಿದೆ. ಸಂಜೆ 5.45 ರಿಂದ ನೃತ್ಯ ವೈವಿಧ್ಯ ನಡೆಲಿದೆ.
     ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ವಿದ್ವಾಂಸ ಡಾ.ಪಿ.ಕೃಷ್ಣ ಭಟ್ ಬಗ್ಗೆ:
  12ನೇ ಗಡಿನಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುತ್ತಿರುವ ಡಾ.ಪಿ.ಶ್ರೀಕೃಷ್ಣ ಭಟ್ ಅವರು ಮೂಲತಃ ಕುಂಬ್ಡಾಜೆ ಪುತ್ರೋಡಿಯವರು. ಪ್ರಾಥಮಿಕ ಶಿಕ್ಷಣವನ್ನು ಅಗಲ್ಪಾಡಿ ಶ್ರೀಅನ್ನಪೂರ್ಣೇಶ್ವರಿ ವಿದ್ಯಾಸಂಸ್ಥೆಯಲ್ಲಿ ಪೂರೈಸಿದ ಡಾ.ಪಿ.ಶ್ರೀಕೃಷ್ಣ ಭಟ್, 1963ರಲ್ಲಿ ರಾಷ್ಟ್ರಭಾಷಾ ಪ್ರವೀಣ ಪದವಿ ಪಡೆದರು.ಬಳಿಕ ಧಾರವಾಡದ ಕರ್ನಾಟಕ ವಿವಿಯಿಂದ ಕನ್ನಡ ಬಿ.ಎ.ಹಾಗೂ ಎಂ.ಎ. ಪದವಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಿಂದ 1988ರಲ್ಲಿ ಪಿ.ಎಚ್,ಡಿ ಪಡೆದರು. ಆರಂಭದಲ್ಲಿ ಸುರತ್ಕಲ್ ಗೋವಿಂದ ದಾಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿಕೊಂಡ ಇವರು ಬಳಿಕ ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
    ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸಂಶೋಧನಾ ವಿಭಾಗವನ್ನು 1990ರಲ್ಲಿ ಕಾರ್ಯಪ್ರವೃತ್ತಗೊಳಿಸುವಲ್ಲಿ ಡಾ.ಪಿ.ಕೃಷ್ಣ ಭಟ್ ಅವರ ಶ್ರಮ ಮಹತ್ರವದ್ದು. 1997ರಲ್ಲಿ ಕಣ್ಣೂರು ವಿವಿಯಲ್ಲಿ ಕನ್ನಡ ವಿಭಾಗವನ್ನು ಆರಂಭಿಸಿ ಪಿಎಚ್‍ಡಿ ಅಧ್ಯಯನವನ್ನು ತೊಡಗಿಸಿ ಸುಮಾರು ಹತ್ತು ವರ್ಷಗಳ ಕಾಲ ವಿಭಾಗವನ್ನು ಮುನ್ನಡೆಸಿದರು.
   ಕಲ್ಲಿಕೋಟೆ ಹಾಗೂ ಕಣ್ಣೂರು ವಿವಿಗಳ ಕನ್ನಡ ಅಧ್ಯಯನ ಮಂಡಳಿಗಳಲ್ಲಿ ಅಧ್ಯಕ್ಷರಾಗಿ, ಸದಸ್ಯರಾಗಿ, ಕೌನ್ಸಿಲ್ ಸದಸ್ಯರಾಗಿ 2012ರ ವರೆಗೆ ಕಾರ್ಯಪ್ರವೃತ್ತರಾಗಿದ್ದರು. 2007 ರಿಂದ 13ರ ವರೆಗೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
   ಮಂಗಳೂರು, ಮೈಸೂರು, ಕುವೆಂಪು, ಕರ್ನಾಟಕ, ಬೆಂಗಳೂರು, ಮದರಾಸು,ಮಧುರೈ ವಿವಿಗಳ ಕನ್ನಡ ಪರೀಕ್ಷಾ ಮಂಡಳಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವ ಪ್ರೊ.ಪಿ.ಕೃಷ್ಣ ಭಟ್ ಅವರದು. ಕೇರಳ ಶಾಲಾ ಪಠ್ಯಪುಸ್ತಕ ರಚನಾ ಮಮಡಳಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಈಗಲೂ ಸೇವೆ ಸಲಲಿಸುತ್ತಿದ್ದಾರೆ. ರಾಜ್ಯದ ಸಂಪೂರ್ಣ ಸಾಕ್ಷರತಾ ಯೋಜನೆಯಡಿ ಕನ್ನಡ ಪಠ್ಯ ಪುಸ್ತಕ ರಚನಾ ಸಮಿತಿಯಲ್ಲಿ, ಸಮತ್ವ ಪುಸ್ತಕ ರಚನಾ ಸಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
  ಪ್ರಕಟಿತ ಕೃತಿಗಳು:
   ಶಾಸನಗಳು ಮತ್ತು ವೀರಗಲ್ಲುಗಳು, ಕನ್ನಡ ವ್ಯಾಕರಣ ಪರಂಪರೆಯ ಮೇಲೆ ಸಂಸ್ಕøತದ ಪ್ರಭಾವ, ಶಾಸ್ತ್ರ ಸಾಹಿತ್ಯ ವಿವಾರ(ಸಂಶೋಧನಾಲೇಖನ), ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು, ಕಳ್ಳಿಗೆ ಮಹಾಬಲ ಭಂಡಾರಿ, ಪ್ರೊ. ಪಿ.ಸುಬ್ರಾಯ ಭಟ್, ಹಾಗೂ ಸಂಪಾದಿತ ಕೃತಿಗಳಾದ ಡಿ.ವಿ.ಜಿ.ದರ್ಶನ,ಚಂದ್ರಗಿರಿ, ಪೊಂಗದಿರು, ಗಡಿನಾಡ ದೀಪ ಕೃತಿಗಳನ್ನು ಪ್ರಕಟಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries