ಉಪ್ಪಳ: ಜೀರ್ಣೋದ್ಧಾರ ಹಂತದಲ್ಲಿರುವ ವಾಟೆತ್ತಿಲ ಜಾಲು ಶ್ರೀ ಸುಬ್ರಹ್ಮಣ್ಯೇಶ್ವರ ಕ್ಷೇತ್ರದಲ್ಲಿ ಜ.12 ರಂದು ಕಿರುಷಷ್ಠಿ ಉತ್ಸವ ನಡೆಯಲಿದೆ. ಷಷ್ಠಿ ದಿನದಂದು ಬೆಳಿಗ್ಗೆ ಪ್ರಾತಃ ಪೂಜೆ, ನಂತರ ಮಧ್ಯಾಹ್ನ ಪೂಜೆ ಹಾಗೂ ರಾತ್ರಿ ಪೂಜೆ ನಡೆಯಲಿದೆ. ಪೂರ್ವಾಹ್ನ 10 ರಿಂದ 12.30 ರ ತನಕ ಶಿವಾಜಿ ನಗರ ಚೇರಾಲು ಶ್ರೀ ಶಾರದಾ ಭಜನಾ ಮಂದಿರ ಮತ್ತು ಸಜಂಕಿಲ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಪೂಜಾ ಪ್ರಸಾದ ವಿತರಣೆ ನಂತರ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ ವಾಟೆತ್ತಿಲ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಸಂಘ ಹಾಗೂ ಭಕ್ತವೃಂದದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ವಾಟೆತ್ತಿಲ ಜಾಲು ಶ್ರೀ ಸುಬ್ರಹ್ಮಣ್ಯೇಶ್ವರ ಕ್ಷೇತ್ರದಲ್ಲಿ ಕಿರುಷಷ್ಠಿ ಜ.12 ರಂದು
0
ಜನವರಿ 09, 2019