ಕಾಸರಗೋಡು: ಸಾಮಾಜಿಕ-ಸಾಂಸ್ಕøತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಮತ್ತು ಪಿಲಿಕುಂಜೆ ಆಟ್ರ್ಸ್ ಆ್ಯಂಡ್ ಸ್ಪೋಟ್ರ್ಸ್ ಕ್ಲಬ್ ಸಹಯೋಗದೊಂದಿಗೆ ಪ್ರಶಸ್ತಿ ವಿಜೇತ ಗಾಯಕ ರವೀಂದ್ರ ಪ್ರಭು ಹಾಗು ಕಿಶೋರ್ ಪೆರ್ಲ ಅವರಿಂದ ಭಕ್ತಿ - ಭಾವ - ಜನಪದ ಗೀತೆಗಳ ಝೇಂಕಾರ `ಹರಸು ತಾಯೇ...' ಕಾರ್ಯಕ್ರಮ ಜ.12 ರಂದು ರಾತ್ರಿ 8.30 ರಿಂದ ಪಿಲಿಕುಂಜೆ ಶ್ರೀ ಹೇಮಾಂಬಿಕಾ ದೇವರ ಮನೆ ಆವರಣದಲ್ಲಿ ನಡೆಯಲಿದೆ.
ಈ ಸಂಬಂಧ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಹೇಮಾಂಬಿಕಾ ದೇವರ ಮನೆ ಅಧ್ಯಕ್ಷ ಟಿ.ಶಿವಾಜಿ ರಾವ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ನಗರಸಭಾ ಮಾಜಿ ಸದಸ್ಯ ಎನ್.ಸತೀಶ್ ಉದ್ಘಾಟಿಸುವರು. ಉದ್ಯಮಿ ವಾಮನ ಮುಳ್ಳಂಗೋಡು, ನಗರಸಭಾ ಸದಸ್ಯ ಸುಜಿತ್ ಕುಮಾರ್ ಅಮೈ ಮುಖ್ಯ ಅತಿಥಿಯಾಗಿ ಭಾಗವಹಿಸುವರು.