ಕುಂಬಳೆ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು ನಡೆಸಿಕೊಂಡು ಬರುತ್ತಿರುವ ಯಕ್ಷಗಾನ ಸರಣಿಕಾರ್ಯಕ್ರಮಗಳ ಮುಂದುವರಿಕೆಯಾಗಿ "ಯಕ್ಷ ಕಾವ್ಯಾಂತರಂಗ-2" ಹಾಗೂ "ಅರ್ಥಾಂತರಂಗ-11" ಕಾರ್ಯಕ್ರಮಗಳು ಮೂಡಬಿದ್ರೆಯ 'ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ ಆಲಂಗಾರು' ಕ್ಷೇತ್ರದಲ್ಲಿ ಕ್ಷೇತ್ರದ ಆಡಳಿಮಂಡಳಿ ಹಾಗೂ ಅರ್ಚಕವೃಂದದವರ ಸಹಯೋಗದೊಂದಿಗೆ ಜ. 13 ರಂದು ಭಾನುವಾರ ಬೆಳಿಗ್ಗೆ 10ರಿಂದ ಜರಗಲಿದೆ. ಕಾರ್ಯಕ್ರಮಕ್ಕೆ ಯಕ್ಷಮೇನಕಾ ಮೂಡಬಿದ್ರೆ ಸಹಯೋಗ ನೀಡುತ್ತಿದ್ದು, ಸ್ಥಳೀಯ ಯಕ್ಷಗಾನ ಸಂಘಟನೆಯವರು ಸಹಕರಿಸಲಿದ್ದಾರೆ.
ಬೆಳಿಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆವಹಿಸುವರು. ಕ್ಷೇತ್ರ ಅರ್ಚಕ ಈಶ್ವರ ಭಟ್ ಅವರ ಉಪಸ್ಥಿತಿಯಲ್ಲಿ ಕಲಾಪೋಷಕ ಶ್ರೀಪತಿ ಭಟ್ ಮೂಡಬಿದ್ರೆ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪ್ರದೀಪ್ ಕುಮಾರ್ ಕಲ್ಕೂರ, ಉದಯಕುಮಾರ್ ಶೆಟ್ಟಿ ಮುನಿಯಾಲು, ಗೋವರ್ಧನ ಹೊಸಮನಿ ಭಾಗವಹಿಸುವರು. ಡಾ. ಶ್ರುತ ಕೀರ್ತಿರಾಜ್ ಉಜಿರೆ ಕಾರ್ಯಕ್ರಮ ನಿರೂಪಿಸುವರು.
ಬಳಿಕ ಖ್ಯಾತ ಪ್ರಸಂಗಕರ್ತ ಶ್ರೀಧರ ಡಿ.ಎಸ್. ಅವರ ನಿರ್ದೇಶನದಲ್ಲಿ ಯಕ್ಷ ಕಾವ್ಯಾಂತರಂಗ -2 ಜರಗಲಿದ್ದು ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಾಯ ಸಂಪಾಜೆ, ಬಲಿಪ ಶಿವಶಂಕರ ಭಟ್, ದಿನೇಶ್ ಭಟ್ ಯಲ್ಲಾಪುರ ಭಾಗವಹಿಸುವರು. ಚೆಂಡೆಮದ್ದಳೆಯಲ್ಲಿ ಕೃಷ್ಣಪ್ರಕಾಶ ಉಳಿತ್ತಾಯ, ದಯಾನಂದ ಮಿಜಾರು, ಅವಿನಾಶ್ ಬೈಪಡಿತ್ತಾಯ ಸಹಕರಿಸುವರು.
ಅಪರಾಹ್ನ 2ರಿಂದ ಹಿರಿಯ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರ ನಿರ್ದೇಶನದಲ್ಲಿ ಜರಗುವ "ಅರ್ಥಾಂತರಂಗ-11" ರಲ್ಲಿ 'ಆಶುಸಂಭಾಷಣೆಯ ಆಯಾಮಗಳು - ಅನಿಸಿಕೆ - ಅವಲೋಕನ - ಸಂವಾದ' ಜರಗಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಹಾಗೂ ಅರ್ಥಧಾರಿಗಳಾಗಿರುವ ವಿಠಲ ಶೆಟ್ಟಿ ಬೇಲಾಡಿ ಸರ್ವಾಧ್ಯಕ್ಷೆತೆ ವಹಿಸುವರು. ಹಿಮ್ಮೇಳದಲ್ಲಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಬಲಿಪ ಪ್ರಸಾದ ಭಟ್ , ಚೆಂಡೆಮದ್ದಳೆಯಲ್ಲಿ ಕೃಷ್ಣಪ್ರಕಾಶ್ ಉಳಿತ್ತಾಯ, ದೇವಾನಂದ ಭಟ್ ಬೆಳ್ವಾಯಿ ಹಾಗೂ ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ಹರೀಶ ಬಳಂತಿಮೊಗರು, ವಿಷ್ಣುಶರ್ಮ ಓಟೆಪಡ್ಪು ಭಾಗವಹಿಸುವರು. ಚಕ್ರತಾಳದಲ್ಲಿ ಮುರಾರಿ ಭಟ್ ಸಹಕರಿಸುವರು. ಗುರುರಾಜ ಹೊಳ್ಳ ಬಾಯಾರು ಕಾರ್ಯಕ್ರಮ ನಿರೂಪಿಸುವರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಯಕ್ಷಗಾನ ಕ್ಷೇತ್ರದ ವಿದ್ವಾಂಸರುಗಳಾದ ಪಶುಪತಿ ಶಾಸ್ತ್ರಿ, ಕುಮಾರ ಶೆಟ್ಟಿ ಇರುಬೈಲು, ಗುರುರಾಜ ಸಹಸ್ರಬುದ್ಯೆ, ವೆಂಕಟ್ರಮಣ ಭಟ್ ಕೆರೆಗದ್ದೆ, ವಿದ್ಯಾ ಆರ್ ಭಟ್ ನಡಿಗುತ್ತು ಪುತ್ತಿಗೆ, ಶಾಂತಾರಾಮ ಕುಡ್ವ ಮೂಡಬಿದ್ರೆ, ಪ್ರೊ.ಸದಾಶಿವ ಶೆಟ್ಟಿಗಾರ್ ಕಿನ್ನಿಗೋಳಿ, ಮಹಾವೀರ ಪಾಂಡಿ ಕಾಂತಾವರ ಭಾಗವಹಿಸುವರು. ಯಕ್ಷಗಾನ ಕ್ಷೇತ್ರದ ಆಹ್ವಾನಿತ ಗಣ್ಯರು ಉಪಸ್ಥಿತರಿರುವರು ಎಂದು ಸಿರಿಬಾಗಿಲು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.