HEALTH TIPS

ರಾಜ್ಯಮಟ್ಟದಲ್ಲಿ ಪರ್ಯಟನೆ ನಡೆಸಲಿರುವ ಸಂವಿಧಾನ ಸಂದೇಶ ಯಾತ್ರೆ 14ರಿಂದ ಮಂಜೇಶ್ವರದಿಂದ ಆರಂಭ

         
   ಮಂಜೇಶ್ವರ: ರಾಜ್ಯ ಸಾಕ್ಷರತಾ ಮಿಷನ್ ನೇತೃತ್ವದಲ್ಲಿ ರಾಜ್ಯ ಮಟ್ಟದಲ್ಲಿ ಪರ್ಯಟನೆ ನಡೆಸುವ ಸಂವಿಧಾನ ಸಂದೇಶ ಯಾತ್ರೆ ಜ.14ರಂದು ಮಂಜೇಶ್ವರದಿಂದ ಆರಂಭಗೊಳ್ಳಲಿದೆ. 
         ರಾಜ್ಯ ಸರಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಕೇರಳವಿಧಾನಸಭೆ  ಜಂಟಿ ನೇತೃತ್ವದಲ್ಲಿ ಸಾಕ್ಷರತಾ ಮಿಷನ್ ಆಯೋಜಿಸುವ ಬರಹತ್ ಜನಪರ ಶಿಕ್ಷಣ ಕಾರ್ಯಕ್ರಮದ ಅಂಗವಾಗಿ ಈ ಯಾತ್ರೆ ಸಂಚಾರ ನಡೆಸಲಿದೆ.
   ಮಂಜೇಶ್ವರದಿಂದ ತಿರುವನಂತಪುರಂ ವರೆಗೆ ಸಂವಿಧಾನ ಯಾತ್ರೆ ಪರ್ಯಟನೆ ನಡೆಸಲಿದೆ. 24ರಂದು ತಿರುವನಂತಪುರಂನಲ್ಲಿ ಸಮಾಪ್ತಿಗೊಳ್ಳಲಿದೆ.  ರಾಜ್ಯ ಸಾಕ್ಷರತಾ ಮಿಷನ್ ನಿರ್ದೇಶಕ ಡಾ.ಪಿ.ಎಸ್.ಶ್ರೀಕಲಾ ಜಾಥಾ  ನೇತೃತ್ವ  ವಹಿಸುವರು. 
     ಪ್ರಜಾಪ್ರಭುತ್ವ, ಮತೀಯ ಸೌಹಾರ್ದತೆ, ಹಕ್ಕುಗಳ ಸಮಾನತೆ, ಸ್ತ್ರೀ-ಪುರುಷ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಚಾರ ಸ್ವಾತಂತ್ರ್ಯ ಇತ್ಯಾದಿಗಳ ಬಗ್ಗೆ ಭಾರತದ ಸಂವಿಧಾನದ ತಳಹದಿಯಲ್ಲಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ಯಾತ್ರೆ ನಡೆಯಲಿದೆ.
        ಉದ್ಘಾಟನಾ ಸಮಾರಂಭ:
   ಜ. 14ರಂದು ಮಧ್ಯಾಹ್ನ 2.30ಕ್ಕೆ ಮಂಜೇಶ್ವರ ಗೋವಿಂದ ಪೈ ನಗರದಲ್ಲಿ ಈ ಸಂಬಂಧ ಸಮಾರಂಭ ನಡೆಯಲಿದೆ. ಸಂಸದ ಪಿ.ಕರುಣಾಕರನ್ ಯಾತ್ರೆ ಉದ್ಘಾಟಿಸುವರು. ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಜಿಲ್ಲೆಯ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿರುವರು.
     ಜಿಲ್ಲಾ ಮಟ್ಟದ ಪರ್ಯಟನೆ:
    ಜಿಲ್ಲೆಯಲ್ಲಿ ಪರ್ಯಟನೆ ನಡೆಸುವ ವೇಳೆ ಮೂರು ಪ್ರದೇಶಗಳಲ್ಲಿ ಜಾಥಾಕ್ಕೆ ಭವ್ಯ ಸ್ವಾಗತ ನೀಡಲಾಗುವುದು. 14ರಂದು ಸಂಜೆ 5 ಕ್ಕೆ  ಕಾಸರಗೋಡು ಹೊಸಬಸ್ ನಿಲ್ದಾಣ ಬಳಿಯ ಟಿ.ಉಬೈದ್ ನಗರದಲ್ಲಿ, 15ರಂದು ಬೆಳಿಗ್ಗೆ 9 ಕ್ಕೆ ಕಾಂಞÂಗಾಡ್ ಕುಂಞÂ ಮಾಧವಿ ನಗರದಲ್ಲಿ, 10.30ಕ್ಕೆ ಚೆರುವತ್ತೂರು ಟಿ.ಎಸ್.ತಿರುಮುಂಬ್ ನಗರದಲ್ಲಿ ನಡೆಯಲಿದೆ. ಕಾಸರಗೋಡಿನಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು, ಕಾಞÂಂಗಾಡ್ ನಲ್ಲಿ ಶಾಸಕ ಕೆ.ಕುಂಞÂ ರಾಮನ್ ಮತ್ತು ಚೆರುವತ್ತೂರಿನಲ್ಲಿ ಶಾಸಕ ಎಂ.ರಾಜಗೋಪಾಲನ್ ಸಮಾರಂಭಗಳನ್ನು ಉದ್ಘಾಟಿಸುವರು. ಈ ವೇಳೆ ನಡೆಯುವ ಸ್ವಾಗತ ಸಮಾರಂಭ, ಸಂವಿಧಾನ ಸಂಗಮ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries