ಮಂಜೇಶ್ವರ : ರಂಗ ಚೇತನ ಸಂಸ್ಕøತಿ ಕೇಂದ್ರ , ಚೌಟರ ಪ್ರತಿಷ್ಠಾನ , ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ ಸಹಯೋಗದಲ್ಲಿ “ರಾಷ್ಟ್ರೀಯ ಯಕ್ಷ ರಂಗೋತ್ಸವ” ಕಾರ್ಯಕ್ರಮ ಜ. 17 ರಿಂದ 20 ರ ತನಕ ಮಂಜೇಶ್ವರ ಮೀಯಪದವಿನ ಚೌಟರ ಚಾವಡಿಯಲ್ಲಿ ನಡೆಯಲಿದೆಯೆಂದು ಸಂಘಟಕರು ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಜ. 17 ರಂದು ಗುರುವಾರ ಸಂಜೆ 6.30 ಕ್ಕೆ ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಬೆಂಗಳೂರು ರಂಗ ಚೇತನ ಸಂಸ್ಕøತಿ ಕೇಂದ್ರ ಇದರ ಅಧ್ಯಕ್ಷ ಡಿ.ಕೆ ಚೌಟ ಅಧ್ಯಕ್ಷತೆ ವಹಿಸುವರು. ಬಳಿಕ ಮಾರುತಿ ಪ್ರತಾಪ ಯಕ್ಷಗಾನ ಪ್ರಸಂಗ ನಡೆಯಲಿದೆ. 18 ರಂದು ಶುಕ್ರವಾರ ಸಂಜೆ 6.30 ಕ್ಕೆ ಕಾಸರಗೋಡು ಚಿನ್ನಾ , ದಾಮೋದರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬಳಿಕ ಸುದರ್ಶನ ವಿಜಯ ಯಕ್ಷಗಾನ ಪ್ರಸಂಗ ನಡೆಯಲಿದೆ. 19 ರಂದು ಶನಿವಾರ ಸಂಜೆ 6.30 ಕ್ಕೆ ಉಮೇಶ್ ಸಾಲ್ಯಾನ್ ,ಜಯರಾಮ ಮಂಜತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಗಿರಿಜಾ ಕಲ್ಯಾಣ ಯಕ್ಷಗಾನ ಪ್ರಸಂಗ ನಡೆಯಲಿದೆ. 20 ರಂದು ಭಾನುವಾರ ಸಂಜೆ 6.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಡಾ.ಎಂ ಪ್ರಭಾಕರ ಜೋಷಿ , ಡಾ.ಡಿ ಚಂದ್ರಶೇಖರ ಚೌಟ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶ್ರೀ ದೇವಿ ಮಹಿಷ ಮರ್ಧಿನಿ ಯಕ್ಷಗಾನ ಪ್ರಸಂಗ ನಡೆಯಲಿದೆ.
ಸುದ್ದಿಗೋಷ್ಟಿಯಲ್ಲಿ ಶ್ರೀಧರ ರಾವು , ರವಿ , ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಉಪಸ್ಥಿತರಿದ್ದರು.