ನಾವು ಪವಿತ್ರ 18 ಮೆಟ್ಟಿಲುಗಳ ಏರಿ ದೇಗುಲ ಪ್ರವೇಶ ಮಾಡಲಿಲ್ಲ: ಮಹಿಳೆ ಹೇಳಿಕೆ
ಕೊಚ್ಚಿ: ವಿಶ್ವ ವಿಖ್ಯಾತ ಧಾರ್ಮಿಕ ತಾಣ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯ ಪ್ರವೇಶ ಭಾರಿ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ದೇಗುಲ ಪ್ರವೇಶ ಮಾಡಿದ ಮಹಿಳೆ, ತಾವು ಪವಿತ್ರ 18 ಮೆಟ್ಟಿಲುಗಳ ಏರಿ ದೇಗುಲ ಪ್ರವೇಶ ಮಾಡಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ದೇಗುಲ ಪ್ರವೇಶದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮಹಿಳೆ ನಾವು ದೇಗುಲದ ಪವಿತ್ರ 18 ಮೆಟ್ಟಿಲುಗಳ ಮೂಲಕ ದೇಗುಲದ ಪ್ರವೇಶ ಮಾಡಲಿಲ್ಲ. ಬದಲಿಗೆ ಭದ್ರತೆಗೆ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿಗಳ ಮೆಟ್ಟಿಲುಗಳ ಮೂಲಕ ದೇಗುಲ ಪ್ರವೇಶ ಮಾಡಿದೆವು ಎಂದು ಹೇಳಿಕೆ ನೀಡಿದ್ದಾರೆ.
ಮಹಿಳೆಯರಿಗೆ ಪೊಲೀಸ್ ಭದ್ರತೆ
ಮಹಿಳೆಯರ ದೇಗುಲ ಪ್ರವೇಶ ವಿಚಾರ ದೇಶಾದ್ಯಂತ ಸುದ್ದಿಗೆ ಗ್ರಾಸವಾದ ಬೆನ್ನಲ್ಲೇ ಮಹಿಳೆಯರಿಗೆ ಪೊಲೀಸ್ ರಕ್ಷಣೆ ಒದಗಿಸಲಾಗಿದೆ. ಕೇರಳ ಸರ್ಕಾರದ ಆದೇಶದ ಅನ್ವಯ ಮಹಿಳೆಯರಿಗೆ ಮತ್ತು ಅವರ ಕುಟುಂಬಸ್ಥರಿಗೆ ಪೊಲೀಸ್ ಭದ್ರತೆ ಒದಗಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.