HEALTH TIPS

ಎಂಡೋ ಸಂತ್ರಸ್ತರ ಪುನರ್ವಸತಿ : ಈವರೆಗೆ 184.29 ಕೋಟಿ ರೂ.ವೆಚ್ಚ ಸಭೆಯಲ್ಲಿ ಸಚಿವ ಇ.ಚಂದ್ರಶೇಖರನ್ ಪ್ರಕಟ

       
     ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಈ ವರೆಗೆ 184.29 ಕೋಟಿ ರೂ. ವೆಚ್ಚ ಮಾಡಿರುವುದಾಗಿ ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
   ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆದ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ ವಸತಿ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಸಂತ್ರಸ್ತರಲ್ಲಿ 50 ಸಾವಿರ ರೂ.ವರೆಗಿನ ಅವರ ಸಾಲವನ್ನು ಮನ್ನಾ ಮಾಡಲು 1.54 ಕೋಟಿ ರೂ. ಸಂಬಂಧಪಟ್ಟ ಬ್ಯಾಂಕ್‍ಗಳಿಗೆ ಮಂಜೂರುಮಾಡಲಾಗಿದೆ. ಜಿಲ್ಲಾಧಿಕಾರಿಗಳ ಖಜಾನೆಯ ಠೇವಣಿಯಿಂದ ಈ ಮೊಬಲಗು ಮಂಜೂರಾಗಿದೆ. ಈ ಸಂಬಂಧ ಸಾಲಮುಕ್ತ ದೃಢೀಕರಣ ಪತ್ರ ಒದಗಿಸಲು ಬ್ಯಾಂಕ್ ಅಧಿಕಾರಿಗಳಿಗೆ ಕಡ್ಡಾಯ ಆದೇಶ ಮಾಡಲಾಗಿದೆ ಎಂದವರು ತಿಳಿಸಿದರು.
     2017ರ ಸ್ಪೆಷಲಿಸ್ಟ್ ಮೆಡಿಕಲ್ ಕ್ಯಾಂಪ್‍ಗಳಲ್ಲಿ ಭಾಗವಹಿಸಿದವರಲ್ಲಿ 287 ಮಂದಿಯನ್ನು ಈಗಾಗಲೇ ಸಂತ್ರಸ್ತರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ನಂತರ 1618 ಮಂದಿಯನ್ನು ಪುನರ್ ತಪಾಸಣೆ ನಡೆಸಿ ಮಾರಕ ರೋಗಗಳಿಂದ ಬಳಲುತ್ತಿರುವ 76 ಮಂದಿಯನ್ನು ಪತ್ತೆಮಾಡಲಾಗಿದೆ. ಇವರಿಗೆ ಪಿಂಚಣಿ ಸಹಿತ ಸೌಲಭ್ಯಗಳನ್ನು ಒದಗಿಸುವ ಕ್ರಮ ಕೈಗೊಳ್ಳಲಾಗಿದ್ದು, ಅರ್ಹರಿಗೆ ರಾಷ್ಟ್ರೀಯ ಮಾನವಹಕ್ಕು ಆಯೋಗದ ಶಿಫಾರಸು ಪ್ರಕಾರದ ಮೊಬಲಗು ಸರಕಾರದಿಂದ ಲಭ್ಯವಾಗುವ ಕ್ರಮ ಕೈಗೊಳ್ಳಲಾಗಿದೆ ಎಂದವರು ಹೇಳಿದರು.
    ಜಿಲ್ಲೆಯಲ್ಲಿ 6211 ಸಂತ್ರಸ್ತರಿಗೆ ಅನೇಕ ಸಹಾಯಗಳು ಲಭಿಸಿವೆ. ಸಂತ್ರಸ್ತರ ಪಟ್ಟಿಯಲ್ಲಿ ಸೇರದೇ ಇರುವ ಮಾರಕ ರೋಗಗಳಿಂದ ಬಳಲುತ್ತಿರುವ 505 ಮಂದಿಗೆ ಚಿಕಿತ್ಸಾ ಸೌಲಭ್ಯ ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದರು.
   ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಕಳೆದ ವರ್ಷ ಸೆ.14ರಂದು ನಡೆಸಿದ ಎಂಡೋಸಲ್ಫಾನ್ ಜಿಲ್ಲಾ ಮಟ್ಟದ ಘಟಕ ಸಭೆಯ ನಿರ್ಣಯಗಳ ಮುಂದುವರಿದ ಕ್ರಮಗಳ ಮಾಹಿತಿ ನೀಡಿದರು. ಪೆರಿಯ, ಚೀಮೇನಿ, ರಾಜಪುರಂ ತೋಟಗಳಲ್ಲಿ ಬ್ಯಾರೆಲ್‍ಗಳಲ್ಲಿ ಇರಿಸಲಾಗಿರುವ ಎಂಡೋಸಲ್ಫಾನ್  ಕೀಟ ನಾಶಕವನ್ನು ನಾಶಪಡಿಸುವ ನಿಟ್ಟಿನಲ್ಲಿ ಪರಿಣತರ ಸಹಾಯ ಯಾಚಿಸಲಾಗಿದೆ ಎಂದವರು ಹೇಳಿದರು.
   ಜಿಲ್ಲೆಯ ಸಮಾಜ ಸೇವಾ ವಲಯದಲ್ಲಿ ಮೂಲಭೂತ ಸೌಲಭ್ಯ ಏರ್ಪಡಿಸುವ ನಿಟ್ಟಿನಲ್ಲಿ ನಬಾರ್ಡ್ -ಆರ್.ಐ.ಡಿ.ಎಫ್ ಯೋಜನೆಯಲ್ಲಿ ಅಳವಡಿಸಿ 233 ಚಟುವಟಿಕೆಗಳಿಗೆ ಆಡಳಿತಾನುಮತಿ ನೀಡಲಾಗಿದೆ. ಇವುಗಳಲ್ಲಿ 197 ಯೋಜನೆಗಳು ಪೂರ್ಣಗೊಂಡಿವೆ. ಇತರ ಚಟುವಟಿಕೆಗಳನ್ನು ತುರ್ತಾಗಿ ಪೂರ್ಣಗೊಳಿಸಲಾಗುವುದು. ಅಂಗನವಾಡಿಗಳು, ಶಾಲಾ ಕಟ್ಟಡಗಳು, ಆಸ್ಪತ್ರೆಗಳು, ನೀರು ಪೂರೈಕೆ  ಇತ್ಯಾದಿಗಳು ಈ ನಿಟ್ಟಿನಲ್ಲಿ ಪ್ರಧಾನ ಯೋಜನೆಗಳು ಎಂದು ಸಭೆಯಲ್ಲಿ ತಿಳಿಸಲಾಯಿತು.
    ಮುಳಿಯಾರಿನಲ್ಲಿ ಸಮಗ್ರ ಪುನರ್ವಸತಿ ಗ್ರಾಮ ನಿರ್ಮಿಸಲು ರೂಪುರೇಷೆ ಸಿದ್ಧತೆ ನಡೆಸಲಾಗುತಿದ್ದು, ಕೇರಳ ಸಮಾಜ ಸಂರಕ್ಷಣೆ ಮಿಷನ್ ನಿರ್ದೇಶಕ ಡಾ.ಮಹಮ್ಮದ್ ಅಶೀಲ್ ಸಭೆಯಲ್ಲಿ ಈ ಸಂಬಂಧ ವಿಚಾರ ಪ್ರಸ್ತುತಪಡಿಸಿದರು. ಊರಾಳುಂಗಾಲ್ ಲೇಬರ್ ಕಾಂಟ್ರಾಕ್ಟ್ ಸಹಕಾರಿ ಸೊಸೈಟಿ ಪೆÇ್ರಜೆಕ್ಟ್ ವರದಿ ಸಲ್ಲಿಸಲಾಯಿತು.
    ಜಾರಿಯಲ್ಲಿರುವ ಆಹಾರ ಸುರಕ್ಷಾ ನಿಯಮ ಪ್ರಕಾರ ಎಂಡೋಸಲ್ಫಾನ್ ಸಂತ್ರಸ್ತರು ಎಂಬುದು ಪ್ರತ್ಯೇಕ  ಪರಿಶೀಲನಾ ವಿಷಯವಲ್ಲದೇ ಇರುವ ಕಾರಣ ಅರ್ಹರಾದ ಎಲ್ಲ ಕುಟುಂಬಗಳನ್ನು ಆದ್ಯತೆ ಪಟ್ಟಿಯಲ್ಲಿ ಸೇರಿಸಲು ಸಾಧ್ಯವಾಗಿಲ್ಲ ಎಂದು ಸ`Éಯಲ್ಲಿ ಸಂಬಂಧಪಟ್ಟವರು ತಿಳಿಸಿದರು. 1134 ಮಂದಿ ಸಂತ್ರಸ್ತರನ್ನೂ ಆದ್ಯತೆಯ ಪಟ್ಟಿಯಲ್ಲಿ ಸೇರಿಸುವಂತೆ ಸಭೆ ಆದೇಶ ನೀಡಿದೆ.
   ಸಭೆಯಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಜಿಲ್ಲಾ ಮಟ್ಟದ ಘಟಕದ ಸದಸ್ಯರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries