ಕಾಸರಗೋಡು: ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಕೇರಳ(ಸವಾಕ್) ಕಾಸರಗೋಡು ವಲಯ ವಿಶೇಷ ಸಭೆ ಇತ್ತೀಚೆಗೆ ಅಶೋಕನಗರ ಕಲಾ ನಿಲಯದಲ್ಲಿ ಜಿಲ್ಲಾಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕಾಸರಗೋಡು ವಲಯ ಕಾರ್ಯದರ್ಶಿ ಸುಶ್ಮಿತಾ ಆರ್, ಹಿರಿಯ ಕಲಾವಿದ ಶಂಕರ್ ಸ್ವಾಮಿಕೃಪಾ, ತಾರಾನಾಥ ಮಧೂರು, ರಹ್ಮಾನ್ ಕೊಚ್ಚಿ, ಮಾಧವ, ಭಾರತಿ, ಪ್ರಸನ್ನ, ಜಯಶ್ರೀ ಸುವರ್ಣ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಜನವರಿ 19 ರಂದು ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪವಿರುವ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ವಲಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು. ಸಮ್ಮೇಳನದಲ್ಲಿ ಸವಾಕ್ ರಾಜ್ಯ ಹಾಗೂ ಜಿಲ್ಲಾ ನೇತಾರರು ಭಾಗವಹಿಸುವರು. ಕೇರಳ ತುಳು ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸವಾಕ್ ಜಿಲ್ಲಾಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಅವರನ್ನು ಈ ಸಂದರ್ಭ ಅಭಿನಂದಿಸಿ ಗೌರವಿಸಲಾಗುವುದು. ಸವಾಕ್ ಕಾಸರಗೊಡು ವಲಯ ಅಧ್ಯಕ್ಷರಾಗಿದ್ದ ಸನ್ನಿ ಅಗಸ್ಟಿನ್ ಅವರನ್ನು ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕಗೊಳಿಸಿ ಪದನ್ನೋತಿ ನೀಡಲಾಗಿದ್ದು, ವಲಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದಯಾ ಪಿಲಿಕುಂಜೆ ಅವರ ಪದಗ್ರಹಣ ಈ ಸಂದರ್ಭ ನಡೆಯಲಿದೆ.