ಮತ್ತು ಸ್ವಾಮಿ ಆನಂದ ತೀರ್ಥರ ಸಂಸ್ಮರಣೆ: ಸಂಘಟನಾ ಸಮಿತಿ ರಚನೆ
ಕಾಸರಗೋಡು: ರಾಜ್ಯದ ಬಲುದೊಡ್ಡ ಸಾಮಾಜಿಕ ಕ್ರಾಂತಿ ಸಹಪಂಕ್ತಿ ಭೋಜನ ಆಂದೋಲನದ 80ನೇ ವಾರ್ಷಿಕೋತ್ಸವ ಮತ್ತು ರಾಜ್ಯದ ಪ್ರಗತಿಪರ ಚಳವಳಿ ನೇತಾರ ಸ್ವಾಮಿ ಆನಂದ ತೀರ್ಥರ ಸಂಸ್ಮರಣೆ ಕಾರ್ಯಕ್ರಮ ಜ.19.20ರಂದು ಕೊಡಕ್ಕಾಡ್ ವೆಳ್ಳಿಚ್ಚಾಲ್ ನಲ್ಲಿನಡೆಯಲಿದೆ.
ಪುರೋಗಮನ ಕಲಾ ಸಾಹಿತ್ಯ ಸಂಘ, ಕೇರಳ ನಾಡನ್ ಕಲಾ ಅಕಾಡೆಮಿ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ವತಿಯಿಂದ ಕಾರ್ಯಕ್ರಮ ಜರುಗಲಿದೆ.
ಸ್ವಾಮಿ ಆನಂದ ತೀರ್ಥರ ಬದುಕಿನ ಚಿತ್ರಣ, ಸಹಪಂಕ್ತಿ ಭೋಜನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಚಿತ್ರ ಪ್ರದರ್ಶನ, ವಿಚಾರಸಂಕಿರಣ, ಕಲಾಕಾರ್ಯಕ್ರಮ, ಸಹಪಂಕ್ತಿ ಭೋಜನ ಇತ್ಯಾದಿಗಳು ಕಾರ್ಯಕ್ರಮ ಅಂಗವಾಗಿ ನಡೆಯಲಿದೆ.
ಈ ಸಂಬಂಧ ವೆಳ್ಳಿಚ್ಚಾಲ್ ನಲ್ಲಿ ಸಂಘಟಕ ಸಮಿತಿ ರಚನೆ ಸಭೆ ಜರುಗಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಡಾ.ವಿ.ಪಿ.ಪಿ.ಮುಸ್ತಫಾ ಸಭೆ ಉದ್ಘಾಟಿಸಿದರು. ಗ್ರಾಮಪಂಚಾಯತ್ ಅಧ್ಯಕ್ಷ ಟಿ.ವಿ.ಶ್ರೀಧರನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಅಕಾಡೆಮಿ ನಿರ್ವಾಹಕ ಸಮಿತಿ ಸದಸ್ಯ ಇ.ಪಿ.ರಾಜಗೋಪಾಲನ್, ಇ.ಕುಂ??ರಾಮನ್, ಪಿ.ರಾಘವನ್, ಪಿ.ಪಿ.ಸುಕುಮಾರನ್, ಪಿ.ಸಿ.ಪ್ರಸನ್ನ, ಸಿ.ಎಂ.ವಿನಯಚಂದ್ರನ್, ಎನ್.ರವೀಂದ್ರನ್ ಮೊದಲಾದವರು ಉಪಸ್ಥಿತರಿದ್ದರು. ರವೀಂದ್ರನ್ ಕೊಡಕ್ಕಾಡ್ ಸ್ವಾಗತಿಸಿದರು. ವಿ.ವಿ.ಕೃಷ್ಣನ್ ವಂದಿಸಿದರು.
ಸಂಘಟನಾ ಸಮಿತಿ ಪದಾಧಿಕಾರಿಗಳು : ಅಧ್ಯಕ್ಷ -ಶಾಸಕ ಎಂ.ರಾಜಗೋಪಾಲನ್, ಕಾರ್ಯಕಾರಿ ಅಧ್ಯಕ್ಷ-ಪಿ.ಪಿ.ಸುಕುಮಾರನ್, ಪ್ರಧಾನ ಸಂಚಾಲಕ-ರವೀಂದ್ರನ್ ಕೊಡಕ್ಕಾಡ್,ಸಂಚಾಲಕರು-ಎನ್.ರವೀಂದ್ರನ್, ಇ.ಕುಂಞÂ ಕೃಷ್ಣನ್, ವಿ.ವಿ.ಕೃಷ್ಣನ್, ಪಿ.ಸಿ.ಪ್ರಸನ್ನ. ವಿವಿಧ ಉಪಸಮಿತಿಗಳ ರಚನೆಯೂ ನಡೆಯಿತು.