ಕಾಸರಗೋಡು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವ್ಯಾಪ್ತಿಯ ಎಂಪ್ಲಾಯಿಬಿಲಿಟಿ ಸೆಂಟರ್ ನಲ್ಲಿ ಜ.19ರಂದು ಬೆಳಗ್ಗೆ 11 ಗಂಟೆಗೆ ಶಿಕ್ಷಕರ ಎರಡು ಹುದ್ದೆಗೆ, ಮಾರಾಟ ಅಧಿಕಾರಿಯ ಒಂದು ಹುದ್ದೆಗೆ ಸಂದರ್ಶನ ನಡೆಯಲಿದೆ.
ಇತಿಹಾಸ ಮತ್ತು ಸಮಾಜಶಾಸ್ತ್ರ ಪದವೀಧರರು ಶಿಕ್ಷಕರ ಹುದ್ದೆಯ ಸಂದರ್ಶನದಲ್ಲಿ ಭಾಗವಹಿಸಬಹುದು. 10 ಸಾವಿರ ರೂ.ಮಾಸಿಕ ವೇತನ ಲಭಿಸಲಿದೆ. ಮಾರಾಟ ಅಧಿಕಾರಿ ಹುದ್ದೆಗೆ ಪ್ಲಸ್ ಟು ಶಿಕ್ಷಣಾರ್ಹತೆ ಇರುವವರು ಅರ್ಹರಾಗಿದ್ದಾರೆ. 12 ಸಾವಿರ ರೂ.ನಿಂದ 15 ಸಾವಿರ ರೂ. ಮಾಸಿಕ ವೇತನ ವಿರುವುದು.
ಆಸಕ್ತರು ಅಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರು ಎಂಪ್ಲಾಯಿಬಿಲಿಟಿ ಕೇಂದ್ರಕ್ಕೆ ಕೇಂದ್ರದ ಗುರುತು ಚೀಟಿಯ ನಕಲು, ಶಿಕ್ಷಣಾರ್ಹತೆ ಪತ್ರದ ನಕಲು ಸಹಿತ 250 ರೂ.ಪಾವತಿಸಿ ವನ್ ಟೈಂ ನೋಂದಣಿ ನಡೆಸಿ ಹಾಜರಾಗಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ : 9207155700, 04994-297470.