ಕುಂಬಳೆ: ನಾರಾಯಣಮಂಗಲ ಸಮೀಪದ ಕಾನ ಶ್ರೀ ಶಂಕರನಾರಾಯಣ ಮಠದಲ್ಲಿ ವರ್ಷಾವಧಿ ಹೊಸ್ತಿನ ದೇವಕಾರ್ಯ ಹಾಗು ಶ್ರೀ ಧೂಮಾವತಿ ದೈವದ ಕೋಲ ಕಾರ್ಯಕ್ರಮವು ಫೆ.2 ಮತ್ತು 3 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಫೆ.1 ರಂದು ಪೂರ್ವಾಹ್ನ 10 ಕ್ಕೆ ಕೊಪ್ಪರಿಗೆ ಮುಹೂರ್ತ, ಫೆ.2 ರಂದು ಪೂರ್ವಾಹ್ನ 8 ರಿಂದ ರುದ್ರ ಪಾರಾಯಣ, 10.30 ಕ್ಕೆ ತುಲಾಭಾರ ಸೇವೆ, 11.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 7.30 ಕ್ಕೆ ಭಂಡಾರ ಮನೆಯಿಂದ ಶ್ರೀ ಧೂಮಾವತೀ ದೈವದ ಭಂಡಾರ ಹೊರಟು, ದೈವಸ್ಥಾನದಲ್ಲಿ ತಂಬಿಲ ಮುಗಿಸಿ ಶ್ರೀ ಶಂಕರನಾರಾಯಣ ಮಠಕ್ಕೆ ಆಗಮನ, ಬಳಿಕ ಶ್ರೀ ಶಂಕರನಾರಾಯಣ ದೇವರಿಗೆ ಮಹಾಪೂಜೆ, ಫೆ.3 ರಂದು ಪೂರ್ವಾಹ್ನ 10 ಕ್ಕೆ ಶ್ರೀ ಧೂಮಾವತಿ ದೈವದ ಕೋಲ, ಮಧ್ಯಾಹ್ನ 12 ಕ್ಕೆ ಪ್ರಸಾದ ವಿತರಣೆ ನಡೆಯುವುದು.