ಬದಿಯಡ್ಕ: ಮುಟ್ಟತ್ತೋಡಿ ಬಾರಿಕ್ಕಾಡು ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಮಹೋತ್ಸವ ಜ.20 ರಿಂದ 22 ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಜ.20 ರಂದು ಸಂಜೆ 6 ಕ್ಕೆ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಂದ ಹರಿಕಥಾ ಸಂಕೀರ್ತನೆ, ರಾತ್ರಿ 7 ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, 9 ಕ್ಕೆ ಮಹಾಪೂಜೆ, ಮಂಗಳಾರತಿ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, ಜ.21 ರಂದು ಪೂರ್ವಾಹ್ನ 8 ಕ್ಕೆ ಗಣಪತಿ ಹವನ, ಉಷ:ಪೂಜೆ, ಪಂಚಗವ್ಯ, ನವಕಾಭಿಷೇಕ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಪ್ರಸಾದ ಭೋಜನ, ಸಂಜೆ 5.30 ರಿಂದ ಭಜನೆ, ರಾತ್ರಿ 7.30 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಹೊರಡುವುದು. 8.30 ಕ್ಕೆ ಮಹಾಪೂಜೆ, 9 ಕ್ಕೆ ಶ್ರೀ ದೇವರ ಉತ್ಸವ ಬಲಿ, ರಾಜಾಂಗಣ ಪ್ರಸಾದ, ಅನ್ನದಾನ ನಡೆಯಲಿದೆ.
ಜ.22 ರಂದು ಪೂರ್ವಾಹ್ನ 9 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ, 11.30 ಕ್ಕೆ ಪ್ರಸಾದ ವಿತರಣೆ, 12.30 ಕ್ಕೆ ಶ್ರೀ ದೈವದ ಭಂಡಾರ ಸ್ವಾಸ್ಥಾನಕ್ಕೆ ನಿರ್ಗಮನ ಜರಗಲಿದೆ.