ಚೆನ್ನೈ: ಕಾರ್ಮಿಕ ಸಂಘಟನೆಗಳು ಕರೆಕೊಟ್ಟಿದ್ದ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರದ ಬಿಸಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಹ ತಟ್ಟಿದೆ.ಬ್ಯಾಂಕ್ ನೌಕರರ ಮುಷ್ಕರದ ಕಾರಣ ಬರೋಬ್ಬರಿ 20,000 ಕೋಟಿ ಮೌಲ್ಯದ ಚೆಕ್ ಗಳು ಕ್ಲಿಯರ್ ಆಗದೆ ಬಾಕಿ ಉಳಿದಿವೆ ಎಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಮುಖ ಒಕ್ಕೂಟವಾದ ಅಖಿಲಭಾರತ ಬ್ಯಾಂಕ್ ನೌಕರರ ಒಕ್ಕೂಟ (ಎಐಬಿಇಎ) ತಿಳಿಸಿದೆ.
ಕೇಂದ್ರ ಸರ್ಕರಾದ ವಿವಿಧ ನೀತಿಗಳ ವಿರೋಧಿಸಿ ಜನವರಿ 8 ಮತ್ತು 9 ರಂದು ದೇಶದಲ್ಲಿ ಕೇಂದ್ರ ಕಾರ್ಮಿಕ ಒಕ್ಕೂಟಗಳು ಎರಡು ದಿನಗಳ ಕಾಲ ಮುಷ್ಕರ ನಡೆಸಿದೆ.ಈ ಕಾರಣದಿಂದ ಸುಮಾರು 20 ಸಾವಿರ ಕೋಟಿ ರೂ. ಮೌಲ್ಯದ ಚೆಕ್ ಗಳು ದೇಶದಾದ್ಯಂತ ಕ್ಲಿಯರ್ ಆಗದೆ ಬಾಕಿ ಉಳಿದಿವೆ ಎಂದು ಎಐಬಿಇಎ ಹೇಳಿದೆ.
ಬ್ಯಾಂಕುಗಳಲ್ಲಿನ ಅಧಿಕಾರಿಗಳು ಮುಷ್ಕರಕ್ಕೆ ಸೇರದಿದ್ದರೂ, ಅವರು ನೈತಿಕ ಬೆಂಬಲ ನೀಡಿದ್ದಾರೆ.ಆದ್ದರಿಂದ ಶಾಖೆಗಳನ್ನು ತೆರೆದಿದ್ದರೂ, ನಗದು ವ್ಯವಹಾರಗಳಂತಹ ಸಾಮಾನ್ಯ ಬ್ಯಾಂಕಿಂಗ್ ಸೇವೆಗಳುತಪಾಸಣೆ, ಹಣ ರವಾನೆ, ಬಿಲ್ಲುಗಳನ್ನು ಪಾಸು ಮಾಡುವುದು ಸೇರಿ ಹಲವು ಹಣಕಾಸಿನ ವ್ಯವಹಾರಗಳ ಮೇಲೆ ಪರಿಣಾಮವಾಗಿದೆ ಎಂದು ಹೇಳಿಕೆ ತಿಳಿಸಿದೆ.
ಬ್ಯಾಂಕುಗಳಲ್ಲಿ ಅತಿ ಹೆಚು ಪ್ರಮಾಣದ ಕೆಟ್ಟ ಸಾಲಗಳು (ಬ್ಯಾಡ್ ಲೋನ್) ಗಳಿರುವುದು ದೊಡ್ಡ ಸಮಸ್ಯೆಯಾಗಿದೆ. ಸೇಶದಾದ್ಯಂತ ಬ್ಯಾಂಕ್ ಗಳಲ್ಲಿ 13 ಲಕ್ಷ ಕೋಟಿ ರೂ. ಕೆಟ್ಟ ಸಾಲಗಳಿವೆ. ಇದರಿಂದ 21 ಸಾರ್ವಜನಿಕ ಬ್ಯಾಂಕ್ ಗಳಲ್ಲಿ 19 ಬ್ಯಾಂಕುಗಳು ನಿವ್ವಳ ನಷ್ಟದಲ್ಲಿವೆ. ಮಾರ್ಚ್ 31, 2018 ರ ವೇಳೆಗೆ ಅವುಗಳು ಕೇವಲ 155,585 ಕೋಟಿ ರೂ. ಲಾಭ ಗಳಿಸಿವೆ.
ಈ ಬ್ಯಾಂಕುಗಳು ರೂ. 240,956 ಕೋಟಿ ಮೊತ್ತದ ಕೆಟ್ಟ ಸಾಲ ಹಾಗೂ ಇತರೆ ಸಾಲಗಳನ್ನು ನೀಡಿದ್ದು ಇದರಿಂದ 85,371 ಕೋಟಿ ರೂ. ನಷ್ಟವಾಗುವಂತಾಗಿದೆ ಎಂದು ಹೇಳಿಕೆ ತಿಳಿಸಿದೆ.