ಕುಂಬಳೆ: ಮೊಗ್ರಾಲ್‍ಪುತ್ತೂರು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಸರಣಿ ರೂಪದಲ್ಲಿ ಒಂದೂವರೆ ತಿಂಗಳ ಕಾಲಾವಧಿಯಲ್ಲಿ ನಡೆಯುವ ಸಾಂಸ್ಕøತಿಕ ಸಂಭ್ರಮ `ಗ್ರಾಮೋತ್ಸವ 2018-19'ರ ಲಾಂಛನ ಬಿಡುಗಡೆ ಸಮಾರಂಭ ನಡೆಯಿತು.
ಪ್ರಧಾನ ವಾಹಿನಿಯಿಂದ ದೂರಸರಿಯುತ್ತಿರುವ ಸ್ಥಳೀಯ ಕಲಾಪ್ರಕಾರಗಳನ್ನು ಯುವಜನತೆಗೆ ಹಸ್ತಾಂತರ ನಡೆಸುವ ಮೂಲಕ ಪುನಶ್ಚೇತನ ಮತ್ತು ಕಲಾ-ಕ್ರೀಡಾ-ಸಾಂಸ್ಕøತಿಕ ವಲಯಗಳಲ್ಲಿ ಯುವಜನತೆಯ ಪಾತ್ರ ಸಕ್ರಿಯಗೊಳಿಸುವ ಉದ್ದೇಶದಿಂದ ಮೊಗ್ರಾಲ್‍ಪುತ್ತೂರು ಗ್ರಾಮಪಂಚಾಯತಿಯ ನೇತೃತ್ವದಲ್ಲಿ ಈ ಸಮಾರಂಭ ನಡೆಯಲಿದೆ. ಸ್ವಯಂಸೇವಾ-ಸಾಂಸ್ಕøತಿಕ ಸಂಘಟನೆಗಳು, ಕಲಾ-ಕ್ರೀಡಾ ಸಂಘಟನೆಗಳು, ಕುಟುಂಬಶ್ರೀ, ಅಂಗನವಾಡಿ, ಉದ್ಯೋಗ ಖಾತರಿ ವಲಯ ಸದಸ್ಯರು ಮೊದಲಾದವರ ಸೇರ್ಪಡೆಯೊಂದಿಗೆ ಗ್ರಾಮೋತ್ಸವ ಮೇಳ ಜರಗಲಿದೆ.
ಗ್ರಾಮೋತ್ಸವದ ಪೂರ್ವಭಾವಿಯಾಗಿ ನಡೆದ ವರ್ಣರಂಜಿತ ಮೆರವಣಿಗೆ ಸಂಬಂಧ ಸಭಾಕಾರ್ಯಕ್ರಮದಲ್ಲಿ ಮಧೂರು ಗ್ರಾಮಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್ ಲಾಂಛನ ಬಿಡುಗಡೆಗೊಳಿಸಿದರು. ಶಾಸಕ ಎನ್.ಎ.ನೆಲ್ಲಿಕುನ್ನು, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷ ಎ.ಜಲೀಲ್, ಚೆಂಗಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಹಿನಾ ಸಲೀಂ, ಮಾಜಿ ಸಚಿವ ಸಿ.ಟಿ.ಅಹಮ್ಮದಾಲಿ ಮೊದಲಾದವರು ಉಪಸ್ಥಿತರಿದ್ದರು.