ಪೆರ್ಲ:ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪಕ್ಷಿ ವೈವಿಧ್ಯತೆಯನ್ನು ಪರಿಚಯಿಸಲು ಶುಕ್ರವಾರ ಬಾನಾಡಿ- 2019 ಪಕ್ಷಿ ನಿರೀಕ್ಷಣೆ ಶಿಬಿರ ನಡೆಯಿತು.
ಪಕ್ಷಿ ನಿರೀಕ್ಷಕ ರಾಜು ಕಿದೂರು, ಪಕ್ಷಿಗಳ ವೈವಿಧ್ಯಮಯ ಲೋಕವನ್ನು ಪರಿಚಯಿಸಿ ಕಾಡು ಹಕ್ಕಿಗಳು, ಜಲ ಪಕ್ಷಿ, ಸಾಮಾನ್ಯವಾಗಿ ಕಂಡು ಬರುವ ಬಾನಾಡಿಗಳ ಕುರಿತು ತರಗತಿ ನಡೆಸಿದರು.ವಲಸೆ ಹಕ್ಕಿಗಳು, ಪಕ್ಷಿಗಳಿಂದ ಪರಿಸರಕ್ಕೆ ಸಿಗುವ ಪ್ರಯೋಜನಗಳ ಕುರಿತಿ ಚರ್ಚೆ ನಡೆಯಿತು.ಶಾಲಾ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಸ್ವಾಗತಿಸಿ, ಸಹ ಶಿಕ್ಷಕ ಸಚ್ಚಿದಾನಂದ ಮುಗೇರು ವಂದಿಸಿದರು.
ಶಿಕ್ಷಕ ಮಂಜುನಾಥ್ ಭಟ್, ಕಾಸರಗೋಡು ಪಕ್ಷಿ ಪ್ರೇಮಿ ತಂಡದ ಪ್ರಣವ್ ಕಾರ್ಲೆ, ಆಶಿಫ್ ಕಳತ್ತೂರು, ಜಾನ್ಸನ್ ಮುಗ್ರೋಡ್ ನೇತೃತ್ವದಲ್ಲಿ ಸ್ವರ್ಗ ಪ್ರದೇಶದಲ್ಲಿ ಪಕ್ಷಿ ವೀಕ್ಷಣೆಗೆ ತೆರಳಿದ ಮಕ್ಕಳು ಯುರೋಪಿಯನ್ ವಲಸೆ ಹಕ್ಕಿ ಗ್ರೀನ್ ವಾಬ್ರ್ಲರ್, ಬ್ಲಿತ್ ರೀಡ್ ವಾಬ್ರ್ಲರ್, ಭಾಗಿಕವಾಗಿ ವಲಸೆ ಹೋಗುವ ಹಳದಿ ಗಿಳಿ ಸೇರಿದಂತೆ 23 ಹಕ್ಕಿಗಳನ್ನು ಗುರುತಿಸಿದರು.ಮೂರು ಸೂಜಿ ಹಕ್ಕಿ ಗೂಡುಗಳನ್ನು, ಒಂದು ಬೃಹತ್ ಕಣಜದ ಗೂಡು, ನಾನಾ ಪ್ರಬೇಧಗಳ ಚಿಟ್ಟೆ, ದುಂಬಿ, ಹಾವುಗಳನ್ನು ವೀಕ್ಷಿಸಿದರು.ನಾನಾ ಸಸ್ಯ ವರ್ಗಗಳ ಪರಿಚಯ ಪಡೆದರು.