ಕಾಸರಗೋಡು: ಈ ವರ್ಷ ಎಪ್ರಿಲ್ - ಮೇ ತಿಂಗಳಲ್ಲಾಗಿ ಲೋಕಸಭೆಗೆ ನಡೆಯಲಿರುವ ಚುನಾವಣೆಯ ಅಂತಿಮ ಮತದಾರ ಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗವು ಜ.21ರಂದು ಪ್ರಕಟಿಸಲಿದೆ.
ಹೀಗೆ ಪ್ರಕಟಿಸಲಾಗುವ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ಒಳಗೊಂಡಿದೆಯೇ, ಅದರಲ್ಲಿ ಯಾವುದಾದರೂ ತಪ್ಪುಗಳಿವೇ, ಹೆಸರು ಇಲ್ಲದಿದ್ದಲ್ಲಿ ಸೇರ್ಪಡೆಗೊಳಿಸಲು ಹಾಗೂ ತಪ್ಪುಗಳಿದ್ದಲ್ಲಿ ಸರಿಪಡಿಸಲು ಬಳಿಕ ಅಗತ್ಯದ ಸಮಯಾವಕಾಶವನ್ನು ನೀಡಲಾಗುವುದು ಎಂದು ಚುನಾವಣಾ ಆಯೋಗವು ತಿಳಿಸಿದೆ.
ಮತದಾರ ಯಾದಿಯಲ್ಲಿ ಹೆಸರು ನೋಂದಾಯಿಸಲು ಈಗಲೂ ಅವಕಾಶವಿದೆ. ಮತದಾರ ಪಟ್ಟಿಯಲ್ಲಿ ಹೆಸರು ಒಳಗೊಂಡಿದೆಯೇ ಎಂಬುದನ್ನು ಆನ್‍ಲೈನ್ ಮೂಲಕವೂ ಪರಿಶೀಲಿಸಬಹುದು. ಚುನಾವಣಾ ಗುರುತುಚೀಟಿ ಮಾತ್ರ ಕೈಯಲ್ಲಿದ್ದಲ್ಲಿ ಮತ ಚಲಾಯಿಸುವಂತಿಲ್ಲ. ಬದಲಾಗಿ ಮತದಾರ ಪಟ್ಟಿಯಲ್ಲೂ ಮತದಾರರ ಹೆಸರು ಒಳಗೊಂಡಿರಬೇಕೆಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.