ಕಾಸರಗೋಡು: ಕೂಡ್ಲು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಮತ್ತು ರಕ್ತೇಶ್ವರಿ ಗುಳಿಗ ದೈವಗಳ ಕೋಲ ಜ.25, 26 ಮತ್ತು 27 ರಂದು ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಜ.25 ರಂದು ರಾತ್ರಿ 8 ಗಂಟೆಗೆ ಗಣಪತಿ ಪ್ರಾರ್ಥನೆ, ರಾತ್ರಿ ಪೂಜೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ರಾತ್ರಿ 9 ಕ್ಕೆ ಶ್ರೀ ಮಹಾಲಿಂಗೇಶ್ವರ ಬಾಲಗೋಕುಲದ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಲಿರುವುದು.
ಜ.26 ರಂದು ಬೆಳಿಗ್ಗೆ 8 ಕ್ಕೆ ಗಣಪತಿ ಹೋಮ, ಶುದ್ಧಿ ಕಲಶ, ನವಕಾಭಿಷೇಕ, ನಾಗತಂಬಿಲ ಜರಗುವುದು. 10 ಗಂಟೆಗೆ ದೇವಕೀತನಕ ಕೂಡ್ಲು ಅವರಿಂದ ಹರಿಕಥಾ ಸತ್ಸಂಗ, ಮಧ್ಯಾಹ್ನ 12 ಕ್ಕೆ ತುಲಾಭಾರ, ಮಹಾಪೂಜೆ, ಬಲಿವಾಡು ಕೂಟ, ಅನ್ನದಾನ, ಸಂಜೆ 6 ಕ್ಕೆ ದೀಪಾರಾಧನೆ, 8 ಕ್ಕೆ ಟ್ವಿಂಕಲ್ ಸ್ಟಾರ್ ಡ್ಯಾನ್ಸ್ ಅಕಾಡೆಮಿ ಬೈಲೂರು ಉಡುಪಿ ಅವರಿಂದ ನೃತ್ಯ ವೈಭವ, 9.30 ರಿಂದ ಉತ್ಸವ ಪೂಜೆ, ಶ್ರೀ ಭೂತಬಲಿ, ಸುಡುಮದ್ದು ಪ್ರದರ್ಶನ ಜರಗಲಿದೆ.
ಜ.27 ರಂದು ಬೆಳಿಗ್ಗೆ 8 ರಿಂದ ಅಯ್ಯಂಗಾಯಿ, ದರ್ಶನ ಬಲಿ, ರಾಜಾಂಗಣ ಪ್ರಸಾದ, 10 ರಿಂದ ಶ್ರೀ ರಕ್ತೇಶ್ವರಿ ಮತ್ತು ಗುಳಿಗ ಕೋಲ ನಡೆಯಲಿರುವುದು.