ಮುಳ್ಳೇರಿಯ: ರಾಜ್ಯ ಸರಕಾರದ ಜನದ್ರೋಹ-ಕಾರ್ಮಿಕ ವಿರುದ್ಧ ನೀತಿಗೆದುರಾಗ ಫೆ.1ರಂದು ನಡೆಯಲಿರುವ ಸೆಕ್ರೆಟೇರಿಯೇಟ್ ಮುತ್ತಿಗೆಯ ಪ್ರಚಾರಕ್ಕಾಗಿ ಭಾರತೀಯ ಮಜ್ದೂರ್ ಸಂಘ(ಬಿಎಂಎಸ್) ಕಾರಡ್ಕ ಪಂಚಾಯಿತಿ ಸಮಿತಿ ಆಶ್ರಯದಲ್ಲಿ ಎರಡು ಪಾದಯಾತ್ರೆ ಜ.25ರಂದು ನಡೆಯಲಿದೆ.
ಒಂದು ಪಾದಯಾತ್ರೆಯು ಅಂದು ಬೆಳಿಗ್ಗೆ 9ಕ್ಕೆ ಕರ್ಮಂತೋಡಿಯಲ್ಲಿ ಉದ್ಘಾಟನೆಗೊಳ್ಳಲಿದ್ದು, 10.30ಕ್ಕೆ ಬೇರ್ಳಂ, 11.30ಕ್ಕೆ ಕೋಳಿಯಡ್ಕ, 12.30ಕ್ಕೆ ನೆಚ್ಚಿಪಡ್ಪು, 1ಕ್ಕೆ ಮುಂಡೋಳು, 2.30ಕ್ಕೆ ಮುಂಡೋಳು ಜಂಕ್ಷನ್, 3.30ಕ್ಕೆ ಅಡ್ಕ, 4.30ಕ್ಕೆ ಮುಳ್ಳೇರಿಯದಲ್ಲಿ ಸಮಾರೋಪಗೊಳ್ಳಲಿದೆ.
ಇನ್ನೊಂದು ಪಾದಯಾತ್ರೆಯು ಬೆಳಿಗ್ಗೆ 9ಕ್ಕೆ ಕುಂಟಾರಿನಲ್ಲಿ ಉದ್ಘಾಟನೆಗೊಳ್ಳಲಿದ್ದು, 11ಕ್ಕೆ ಪಡಿಯತ್ತಡ್ಕ, 12ಕ್ಕೆ ಕೈತ್ತೋಡು, 1ಕ್ಕೆ ಮಲ್ಲಾವರ, 3ಕ್ಕೆ ಬೇಂಗತ್ತಡ್ಕ, ಸಂಜೆ 4.30ಕ್ಕೆ ಮುಳ್ಳೇರಿಯದಲ್ಲಿ ಸಮಾರೋಪಗೊಳ್ಳಲಿದೆ.