ಕಾಸರಗೋಡು: ಗಣರಾಜ್ಯೋತ್ಸವದ ಜಿಲ್ಲಾ ಮಟ್ಟದ ಕಾರ್ಯಕ್ರಮ ಜ.26ರಂದು ವಿದ್ಯಾನಗರ ನಗರಸಭೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ 8 ಗಂಟೆಗೆ ನಡೆಯುವ ಕಾರ್ಯಕ್ರಮದ ಅಂಗವಾಗಿ ನಡೆಯುವ ಪಥಸಂಚಲನದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ವಂದನೆ ಸ್ವೀಕರಿಸುವರು.
ವಿವಿಧ ಪೆÇಲೀಸ್ ಘಟಕಗಳು, ಅಬಕಾರಿ, ಅರಣ್ಯ ಇಲಾಖೆಗಳು, ಅಗ್ನಿಶಾಮಕದಳ, ವಾಹನ ಇಲಾಖೆ, ಎನ್.ಸಿ.ಸಿ., ಸ್ಕೌಟ್ ಮತ್ತು ಗೈಡ್ಸ್, ಜ್ಯೂನಿಯರ್ ರೆಡ್‍ಕ್ರಾಸ್, ವಿದ್ಯಾರ್ಥಿ ಪೆÇಲೀಸ್ ಮೊದಲಾದವರು ಪಥಸಂಚಲನ ನಡೆಸುವರು. ನಂತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ. ಸ್ವಾತಂತ್ರ್ಯ ಹೋರಾಟಗಾರರು, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ನೇತಾರರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮತ್ತು ಎಲ್ಲ ಸರಕಾರಿ ಕಚೇರಿಗಳ ಸಿಬ್ಬಂದಿ, ಶಿಕ್ಷಣಾಲಯಗಳ ಶಿಕ್ಷಕರು, ಸಿಬ್ಬಂದಿ, ಮಕ್ಕಳು ಕಡ್ಡಾಯವಾಗಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.